ರಾಷ್ಟ್ರೀಯ

ಒಂದೇ ಶ್ರೇಣಿ ಒಂದೇ ಪಿಂಚಣಿ: ಪ್ರತಿಭಟನೆಗೆ ಅಣ್ಣಾ ಹಜಾರೆ

Pinterest LinkedIn Tumblr

Anna Hazare

ಹೊಸದಿಲ್ಲಿ: ಒಂದೇ ಶ್ರೇಣಿ, ಒಂದೇ ಪಿಂಚಣಿ ಯೋಜನೆ ಜಾರಿ ವಿಳಂಬವನ್ನು ವಿರೋಧಿಸಿ 16ನೇ ಕಾರ್ಗಿಲ್‌ ವಿಜಯ್‌ ದಿವಸ್‌ ಸಂದರ್ಭದಲ್ಲಿ ನಿವೃತ್ತ ಯೋಧರು ಭಾನುವಾರ ನಡೆಸಿರುವ ಪ್ರತಿಭಟನೆಯಲ್ಲಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಭಾಗಿಯಾಗಿದ್ದಾರೆ.

ಯೋಜನೆ ಜಾರಿ ಬಗ್ಗೆ ನೀಡಿರುವ ಭರವಸೆಯನ್ನು ಈಡೇರಿಸದ ವಿಚಾರವಾಗಿ ನರೇಂದ್ರ ಮೋದಿ ಸರಕಾರದ ವಿರುದ್ಧ ಅಣ್ಣಾ ಹರಿಹಾಯ್ದಿದ್ದಾರೆ.

ಹಿರಿಯ ಯೋಧರು ಹಾಗೂ ಹುತ್ಮಾತರ ಕುಟುಂಬ ಸದಸ್ಯರನ್ನು ಉದ್ದೇಶಿಸಿ ಜಂತರ್‌ ಮಂಥರ್‌ನಲ್ಲಿ ಮಾತನಾಡಿದ ಅಣ್ಣಾ,’ ಸರಕಾರದ ಭರವಸೆಯೊಂದೇ ಸಾಲದು. ಒಂದೇ ಶ್ರೇಣಿ ಒಂದೇ ಪಿಂಚಣಿ ನಿಜಕ್ಕೂ ಜಾರಿ ಆಗಬೇಕು. ಆದರೆ, ಈ ಬಗ್ಗೆ ಭರವಸೆ ನೀಡಿದರೆ ತಮ್ಮ ಕೆಲಸ ಮುಗಿಯಿತು ಎಂದು ಎನ್‌ಡಿಎ ಸರಕಾರ ಭಾವಿಸಿದಂತೆ ಇದೆ,’ ಎಂದು ಕಿಡಿಕಾರಿದ್ದಾರೆ.

‘ಕಳೆದ ಐದು ದಿನಗಳಿಂದ ಸಂಸತ್ ಕಲಾಪ ನಡೆಯುತ್ತಿಲ್ಲ. ಇದರಿಂದ ನಮ್ಮ ಹಣ ಪೋಲಾಗುತ್ತಿದೆ. ಸಂಸದರಿಗೆ 50,000 ಪಗಾರ ದೊರೆಯುತ್ತಿದೆ. ಆದರೆ, ವಿಧವೆಯರಿಗೆ ಕೇವಲ 3,000ರೂ. ಪಿಂಚಣಿ ದೊರೆಯುತ್ತಿದೆ. ಹಿರಿಯರು ಗೌರವಯುತವಾಗಿ ಬಾಳುವಂತಾಗಬೇಕು,’ ಎಂದು ಅವರು ಗುಡುಗಿದರು.

ಭೂ ವಿಧೇಯಕದ ವಿಚಾರವಾಗಿ ಅಕ್ಟೋಬರ್‌ 2ರಿಂದ ದಿಲ್ಲಿಯಲ್ಲಿ ನಿರಶನ ಆರಂಭಿಸುವುದಾಗಿ ಈಗಾಗಲೇ ಘೋಷಿಸಿರುವ ಭ್ರಷ್ಟಾಚಾರ ವಿರೋಧಿ ಕಾರ್ಯಕರ್ತ ಅಣ್ಣಾ ಹಜಾರೆ, ಒಂದೇ ಶ್ರೇಣಿ, ಒಂದೇ ಪಿಂಚಣಿ ಯೋಜನೆ ಜಾರಿಗಾಗಿ ಎಲ್ಲ ರಾಜ್ಯಗಳಲ್ಲೂ ಪ್ರತಿಭಟನೆ ವಿಸ್ತರಿಸುವುದಾಗಿ ಎಚ್ಚರಿಸಿದ್ದಾರೆ.

Write A Comment