ರಾಷ್ಟ್ರೀಯ

ಪತಿ-ಪತ್ನಿ ನಡುವೆ ಗಲಾಟೆಯಾಗ್ತಿದ್ದರೆ ಈ ಪ್ರಯೋಗ ಮಾಡಿ

Pinterest LinkedIn Tumblr

3752Resolve-Conflict-in-Marriage-Step-16ಮನೆಯಲ್ಲಿ ನೆಮ್ಮದಿ ಇಲ್ಲ. ಚಿಕ್ಕ ಪುಟ್ಟ ವಿಚಾರಕ್ಕೂ ಗಲಾಟೆ. ಪತಿ- ಪತ್ನಿ ನಡುವೆ ಪ್ರತಿದಿನ ಜಗಳ. ಸಾಕಾಗಿದೆ ಸಂಸಾರ ಎನ್ನುವವರಿಗೆ ಸಮಸ್ಯೆ ಬಗೆಹರಿಸಿಕೊಳ್ಳಲು ಇಲ್ಲಿದೆ ಉಪಾಯ.

ಮನೆಯಲ್ಲಿ ನೆಮ್ಮದಿ ಬೇಕಾದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವೊಂದು ನಿಯಮ ಪಾಲಿಸಬೇಕು.

ಪತಿ-ಪತ್ನಿ ಇಬ್ಬರೂ ಜಗಳ ಆಡ್ತಾ ಇದ್ದಲ್ಲಿ, ಕರ್ಕಾಟಕ ಸಂಕ್ರಮಣದ ದಿನದಂದು (ಭಾನುವಾರ ಹೊರತುಪಡಿಸಿ) ಮನೆಗೆ ಗೋ ಮೂತ್ರ ಸಿಂಪಡಿಸಬೇಕು. ಹೀಗೆ ಮಾಡುತ್ತ ಬಂದರೆ ಮನೆಯಲ್ಲಿ ಶಾಂತಿ ನೆಲೆಸುತ್ತದೆ.

ಶುಕ್ಲ ಪಕ್ಷದ ಶುಕ್ರವಾರ ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ, ಬಿಳಿ ವಸ್ತ್ರ ಧರಿಸಿ, ಅಕ್ಕಿ ಬೇಯಿಸಿ, ಅದಕ್ಕೆ ಹಾಲು ಸಕ್ಕರೆ ಹಾಕಿ ಬಿಳಿ ಹಸುವಿಗೆ ತಿನ್ನಿಸುವುದು ಒಂದು.

ಹಾಲಿಗೆ ಕೇಸರಿ ಬೆರೆಸಿ ಪತಿ ಕುಡಿಯಬೇಕು. ಪತ್ನಿ ಮನೆಯಲ್ಲಿ ಗಾಜಿನ ಬಳೆ ತೊಟ್ಟುಕೊಳ್ಳಬೇಕು. ಇದರಿಂದ ಮನೆಯಲ್ಲಿ ಶಾಂತಿ ನೆಲೆಸುತ್ತದೆ ಎಂದು ಜ್ಯೋತಿಷ್ಯ ಹೇಳುತ್ತದೆ.

ಓಲಿಯೆಂಡರ್ಸ್ ಹೂವಿನ ಎಸಳನ್ನು ರುಬ್ಬಿ, ಅದನ್ನು ಪತಿಯ ಹಣೆಗೆ ಪತ್ನಿ ಇಡುತ್ತ ಬಂದರೆ ಇಬ್ಬರ ನಡುವಿನ ಪ್ರೀತಿ ಹೆಚ್ಚಾಗುತ್ತದೆಯಂತೆ.

ಸೋಮವಾರ ಅಶೋಕ ವೃಕ್ಷಕ್ಕೆ ಪೂಜೆ ಮಾಡುವುದರಿಂದ ಇಲ್ಲವೇ ಅದರ 7 ಎಲೆಗಳನ್ನು ತಂದು ಮನೆಯಲ್ಲಿ ಪೂಜೆ ಮಾಡಬೇಕು. ಮುಂದಿನ ಸೋಮವಾರ ಒಣಗಿದ ಎಲೆಗಳನ್ನು ದೇವಸ್ಥಾನದಲ್ಲಿ ಇಡುವುದರಿಂದ ಅಥವಾ ಹರಿಯುವ ನೀರಿನಲ್ಲಿ ಬಿಡುವುದರಿಂದ ಪತಿ-ಪತ್ನಿ ಸಂಬಂಧ ಸುಧಾರಿಸುತ್ತದೆ ಎಂದು ಶಾಸ್ತ್ರ ಹೇಳುತ್ತದೆ.

Write A Comment