ರಾಷ್ಟ್ರೀಯ

ಕಪ್ಪು ಹಣದ ಕಥೆ ಏನಾಯಿತು: ಪ್ರಧಾನಿ ಮೋದಿಗೆ ನಿತೀಶ್ ಪ್ರಶ್ನೆ

Pinterest LinkedIn Tumblr

Nitish-kumarಪಾಟ್ನಾ; ಬಿಹಾರ ಚುನಾವಣಾ ಪ್ರಚಾರ ಸಂಬಂಧ ಎನ್ ಡಿಎ ಪಕ್ಷದ ಪರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಿಹಾರಕ್ಕೆ ಭೇಟಿ ನೀಡಿರುವ ಹಿನ್ನೆಲೆಯಲ್ಲೇ ಪ್ರಧಾನಮಂತ್ರಿಗೆ ಪ್ರಶ್ನೆ ಹಾಕಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ದೇಶದಲ್ಲಿ ತಾಂಡವವಾಡಿ ವಿದೇಶದಲ್ಲಿ ಹಣ ಹೂಡಿರುವ ಭ್ರಷ್ಟಚಾರಿಗಳ ಕಪ್ಪು ಹಣದ ಕಥೆ ಏನಾಯಿತು ಎಂದು ಶನಿವಾರ ಕೇಳಿದ್ದಾರೆ.

ಈ ಕುರಿತಂತೆ ಇಂದು ಬಿಹಾರದಲ್ಲಿ ಮಾತನಾಡಿರುವ ನಿತೀಶ್ ಕುಮಾರ್ ಅವರು, ಬಿಹಾರದಲ್ಲಿರುವ ಜನತೆ ಕೇಂದ್ರ ಸರ್ಕಾರದ ಸಹಾಯದ ನಿರೀಕ್ಷೆಯಲ್ಲಿದೆ. ಅಧಿಕಾರಕ್ಕೆ ಬರುವಾಗ ಕಪ್ಪು ಹಣವನ್ನು ಭಾರತಕ್ಕೆ ಮರಳಿ ತರುತ್ತೇವೆಂದು ಎನ್ ಡಿಎ ಸರ್ಕಾರ ಪ್ರಮಾಣ ಮಾಡಿತ್ತು. ಇದೀಗ ಕಪ್ಪು ಹಣದ ಕುರಿತಂತೆ ಯಾರೊಬ್ಬರು ಏನನ್ನೂ ಹೇಳುತ್ತಿಲ್ಲ. ಕಪ್ಪುಹಣದ ಕಥೆಯೇನಾಯಿತು. ಕಪ್ಪು ಹಣ ಭಾರತಕ್ಕೆ ಈ ವರೆಗೂ ಎಷ್ಟು ಹಿಂದಿರುಗಿದೆ ಎಂಬ ಪ್ರಶ್ನೆಗೆ ಎನ್ ಡಿಎ ಸರ್ಕಾರ ಉತ್ತರ ನೀಡಬೇಕಿದೆ. ಕೇವಲ ವಿದೇಶದಲ್ಲಿ ಕಪ್ಪುಹಣದ ಖಾತೆ ಹೊಂದಿರುವವರ ಹೆಸರು ಬಹಿರಂಗಪಡಿಸಿದರಷ್ಟೇ ಸಾಲದು. ಭಾರತಕ್ಕೆ ಆ ಹಣವನ್ನು ಮತ್ತೆ ತರುವ ಪ್ರಯತ್ನ ನಡೆಸಬೇಕು ಎಂದು ಹೇಳಿದ್ದಾರೆ.

ಇದೇ ವೇಳೆ ಬಿಹಾರ ರಾಜ್ಯದಲ್ಲಿ ಹಲವಾರು ಯೋಜನೆಗಳಿಗೆ ಮೋದಿ ಚಾಲನೆ ನೀಡುವುದರ ಕುರಿತಂತೆ ಮಾತನಾಡಿರುವ ಅವರು, ನಿಜಕ್ಕೂ ಮೋದಿ ಅವರು ಬಿಹಾರ ರಾಜ್ಯಕ್ಕೆ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆಯೇ ಅಥವಾ ಹಳೆಯ ಯೋಜನೆಯನ್ನೇ ಹೊಸ ಯೋಜನೆಯೆಂದು ಹೇಳಿ ಜನರಿಗೆ ಮತ್ತದೇ ಯೋಜನೆಗಳನ್ನೇ ನೀಡುವ ಪ್ರಯತ್ನ ಮಾಡುತ್ತಿದ್ದಾರೆಯೇ ಎಂದು ವ್ಯಂಗ್ಯವಾಡಿದ್ದಾರೆ.

ಬಿಹಾರ ಚುನಾವಣಾ ಪ್ರಚಾರಕ್ಕೆ ಎನ್ ಡಿ ಎ ಪಕ್ಷದ ಪರವಾಗಿ ಇಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಇದೇ ಸಮಯದಲ್ಲಿ ಮೋದಿ ಅವರು ಬಿಹಾರ ರಾಜ್ಯದಲ್ಲಿ ಹಲವು ಯೋಜನೆಗಳ ಉದ್ಘಾಟನೆ ಮಾಡಲಿದ್ದು, ಬಿಹಾರ ರಾಜ್ಯಕ್ಕಾಗಿ ಹಲವಾರು ಅನುದಾನಗಳನ್ನು ಘೋಷಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

Write A Comment