ರಾಷ್ಟ್ರೀಯ

15 ವರ್ಷದ ಸುಷ್ಮಾ ಪಿಎಚ್.ಡಿ ವಿದ್ಯಾರ್ಥಿನಿ

Pinterest LinkedIn Tumblr

sushma

ಲಖನೌ: ದೇಶದಲ್ಲಿಯೇ ಅತ್ಯಂತ ಕಿರಿಯ ವಯಸ್ಸಿಗೆ ವಿಜ್ಞಾನ ಸ್ನಾತಕೋತ್ತರ ಪದವಿ ಪಡೆದ ಸುಷ್ಮಾ ವರ್ಮಾ, ಇನ್ನು ಎನ್ವಿರಾನ್ಮೆಂಟಲ್ ಮೈಕ್ರೋಬಯೋಲಜಿಯಲ್ಲಿ ಸಂಶೋಧನೆ ಕೈಗೊಳ್ಳಲಿದ್ದಾಳೆ!

ಪೌರಕಾರ್ಮಿಕರ ಮಗಳಾದ ಸುಷ್ಮಾ, ಲಖನೌ ಬಾಬಾಸಾಹೇಬ್ ಭೀಮರಾಮ್ ಅಂಬೇಡ್ಕರ್ ವಿಶ್ವವಿದ್ಯಾಲಯ (ಬಿಬಿಎಯು)ದಲ್ಲಿ ಎಂ.ಎಸ್‌ಸಿ (ಮೈಕ್ರೋಬಯೋಲಜಿ) ಪೂರ್ಣಗೊಳಿಸದ್ದಲ್ಲದೇ, ಅತಿ ಹೆಚ್ಚಿನ ಅಂಕ ಪಡೆದಿದ್ದಳು.

ವಿವಿಯ ಸಂಶೋಧನಾ ಪ್ರವೇಶ ಪರೀಕ್ಷೆಯಲ್ಲಿ ಈ ಬಾಲ ಪ್ರತಿಭೆ ಏಳನೇ ರ‍್ಯಾಂಕ್ ಪಡೆದಿದ್ದಾಳೆ. ‘ಸಾಮಾನ್ಯ ವಿಭಾಗದಲ್ಲಿ ಮೂರು ಹಾಗೂ ಒಂದು ಮೀಸಲು ಸೀಟಿರುತ್ತದೆ. ಸುಷ್ಮಾಗೆ ಸಂಶೋಧನೆ ಕೈಗೊಳ್ಳಲು ವಿಶೇಷ ಅವಕಾಶ ಕಲ್ಪಿಸಬಹದು,’ ಎಂದು ವಿಭಾಗ ಮುಖ್ಯಸ್ಥ ನವೀನ್ ಕುಮಾರ್ ಹೇಳಿದ್ದಾರೆ.

‘ವಿಶೇಷ ಅವಕಾಶ ನೀಡಿ, ಸುಷ್ಮಾಗೆ ವಿವಿಯಲ್ಲಿ ಸಂಶೋಧನೆ ಕೈಗೊಳ್ಳಲು ಅವಕಾಶ ನೀಡಲಾಗುತ್ತದೆ,’ ಎಂದು ವಿವಿ ಕುಲಪತಿ ಪ್ರೊ.ಆರ್‌.ಸಿ.ಸೊಬ್ತಿ ಸಹ ಹೇಳಿದ್ದಾರೆ.

ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಸಂಶೋಧನೆ ಕೈಗೊಳ್ಳುತ್ತಿರುವ ಸುಷ್ಮಾಗೂ ಸಂತೋಷವಾಗಿದೆ. ಈಕೆಯ ತಂದೆ ತೇಜ್ ಬಹೂದ್ದೂರ್ ಪೌರಕಾರ್ಮಿಕರಾಗಿದ್ದು, ತಾಯಿ ಛಾಯಾ ದೇವಿ ಗೃಹಿಣಿ. ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ 10ನೇ ತರಗತಿ ಉತ್ತೀರ್ಣರಾಗಿ, ಲಿಮ್ಕಾ ಬುಕ್‌ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ಸುಷ್ಮಾ ಹೆಸರು ದಾಖಲಾಗಿತ್ತು. ಈಕೆಯ ಸಹೋದರ ಶೈಲೆಂದ್ರ ಸಹ ಬಾಲ ಪ್ರತಿಭೆಯಾಗಿದ್ದು, ತನ್ನ 13ನೇ ವರ್ಷದಲ್ಲಿಯೇ ಬಿಸಿಎ ಉತ್ತೀರ್ಣರಾಗಿ, ಇದೀಗ ಬೆಂಗಳೂರಿನಲ್ಲಿ ಎಂಸಿಎ ಮಾಡುತ್ತಿದ್ದಾರೆ. ಮೂರು ವರ್ಷದ ತಂಗಿ ಅನನ್ಯಾ ರಾಮಾಯಣವನ್ನು ಸ್ಪಷ್ಟವಾಗಿ ಓದುತ್ತಾಳೆ.

Write A Comment