ರಾಷ್ಟ್ರೀಯ

ಯಾಕೂಬ್ ಮೆಮನ್‌ಗೆ ಗಲ್ಲು ಬೇಡ: ಸಿಪಿಐ(ಎಂ)

Pinterest LinkedIn Tumblr

Yakub-Memonನವದೆಹಲಿ:  1993ರಲ್ಲಿ ನಡೆದ ಮುಂಬೈ ಬಾಂಬ್ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್‌ನ್ನು ಗಲ್ಲಿಗೇರಿಸುವುದರ ವಿರುದ್ಧ ಸಿಪಿಎಂ ಕಣಕ್ಕಿಳಿದಿದೆ. ಮೆಮನ್‌ನ್ನ ದಯಾ ಅರ್ಜಿಯನ್ನು ಸ್ವೀಕರಿಸಿ ಆತನಿಗೆ ಜೀವಾವಧಿ ಶಿಕ್ಷೆ ನೀಡಬೇಕೆಂದು ಸಿಪಿಐ (ಎಂ) ಪಾಲಿಟ್ ಬ್ಯೂರೋ ತಮ್ಮ ಹೇಳಿದೆ.

ಮೆಮನ್‌ಗೆ ಗಲ್ಲು ಶಿಕ್ಷೆ ವಿಧಿಸಬಾರದು ಎಂಬ ನಿಲುವು ಸಿಪಿಎಂ ಪಾಲಿಟ್ ಬ್ಯುರೋ ಸ್ವೀಕರಿಸಿರುವುದಾಗಿ ತಮ್ಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ.  257 ಜನರ ಸಾವಿಗೆ ಕಾರಣವಾದ ಭಯೋತ್ಪಾದಕ ಕೃತ್ಯವಾಗಿತ್ತು ಮುಂಬೈನಲ್ಲಿ ನಡೆದದ್ದು. ಅದಕ್ಕೆ ಕಾರಣರಾದವರನ್ನು ಕಾನೂನು ವಿಚಾರಣೆಗೊಳಪಡಿಸಿ ಶಿಕ್ಷೆಗೊಳಪಡಿಸಬೇಕು. ಆದರೆ ಈ ಕೃತ್ಯದ ಹಿಂದಿರುವ ಪ್ರಧಾನ ಆರೋಪಿಗಳೆಲ್ಲಾ ಶಿಕ್ಷೆಯಿಂದ ಪಾರಾಗಿದ್ದಾರೆ.

ವಿದೇಶದಲ್ಲಿರುವ ಅವರನ್ನು ಭಾರತಕ್ಕೆ ಕರೆತಂದು ವಿಚಾರಣೆಗೊಳಪಡಿಸಿ ಶಿಕ್ಷೆ ವಿಧಿಸಬೇಕಾಗಿದೆ .ಈ ಹೊತ್ತಲ್ಲಿ ಯಾಕೂಬ್ ಮೆಮನ್‌ನ್ನು ಗಲ್ಲಿಗೇರಿಸುವುದು ಸರಿಯಲ್ಲ. ಕೃತ್ಯಕ್ಕೆ ಸಂಚು ರೂಪಿಸಿದವನು ಯಾಕೂಬ್. ಆತ ಶರಣಾಗತಿಯಾಗಿ ತಪ್ಪೊಪ್ಪಿಕೊಂಡಿದ್ದಾನೆ.  ಹೀಗಿರುವಾಗ ಅವನನ್ನು ಗಲ್ಲಿಗೇರಿಸುವುದು ಸರಿಯಲ್ಲ ಎಂದು ಸಿಪಿಐ (ಎಂ) ಅಭಿಪ್ರಾಯಪಟ್ಟಿದೆ.

Write A Comment