ರಾಷ್ಟ್ರೀಯ

ಅಡ್ವಾಣಿ 1999 ರ ಉಗ್ರರ ಬಿಡುಗಡೆ ಪರವಾಗಿರಲಿಲ್ಲ: ಫಾರೂಕ್ ಅಬ್ದುಲ್ಲಾ

Pinterest LinkedIn Tumblr

advaniನವದೆಹಲಿ: 1999 ರಲ್ಲಿ ನಡೆದಿದ್ದ ಐಸಿ- 814 ವಿಮಾನ ಅಪಹರಣ ಪ್ರಕರಣದಲ್ಲಿ ಉಗ್ರರನ್ನು ಬಿಡುಗಡೆ ಮಾಡುವುದಕ್ಕೆ ಅಂದಿನ ಗೃಹ ಮಂತ್ರಿ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಇಷ್ಟ ಇರಲಿಲ್ಲ ಎಂದು ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅಭಿಪ್ರಾಯಪಟ್ಟಿದ್ದಾರೆ.

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅಬ್ದುಲ್ಲಾ, ಅಡ್ವಾಣಿ ಉಗ್ರರ ಬಿಡುಗಡೆ ಮಾಡುವ ಪರವಾಗಿರಲಿಲ್ಲ, ಬಹುಶಃ ಅವರನ್ನು  ಒತ್ತಡ ಹೇರಿ ಒಪ್ಪಿಸಲಾಗಿತ್ತು ಎಂಬುದು ನನ್ನ ಅಭಿಪ್ರಾಯ ಎಂದು ಹೇಳಿಕೆ ನೀಡಿದ್ದಾರೆ.ಪ್ರಾಮಾಣಿಕವಾಗಿ ಹೇಳಬೇಕೆಂದರೆ ಉಗ್ರರನ್ನು ಬಿಡುಗಡೆ ಮಾಡಿದ್ದು ಭಾರತ ದುರ್ಬಲ ರಾಷ್ಟ್ರ ಎಂಬ ಸಂದೇಶ ನೀಡಿತ್ತು ಎಂದು ಅಬ್ದುಲ್ಲಾ ಅಭಿಪ್ರಾಯಪಟ್ಟಿದ್ದಾರೆ.

ಕಠ್ಮಂಡುಯಿಂದ ನವದೆಹಲಿಗೆ ತೆರಳುತ್ತಿದ್ದ ಐಸಿ- 814 ವಿಮಾನವನ್ನು 1999 ರಲ್ಲಿ ಹರ್ಕತ್-ಉಲ್-ಮುಜಾಹಿದೀನ್ ಸಂಘಟನೆ ಉಗ್ರರು ಅಪಹರಣ ಮಾಡಿದ್ದರು, ನಂತರ ಅಪ್ಘಾನಿಸ್ತಾನದ ಕಂದಹಾರ್ ಗೆ ಕೊಡೊಯ್ಯಲಾಗಿತ್ತು. ಪ್ರಯಾಣಿಕರ ಸುರಕ್ಷತೆಯ ಕಾರಣದಿಂದ ಉಗ್ರರ ಬೇಡಿಕೆಯಂತೆ ಭಾರತದ ವಶದಲ್ಲಿದ್ದ 3  ಉಗ್ರರನ್ನು ಬಿಡುಗಡೆ ಮಾಡಲಾಗಿತ್ತು.

Write A Comment