ಮನೋರಂಜನೆ

ಪ್ರಧಾನಿ ಮೋದಿ ಕಾರ್ಯವೈಖರಿಯನ್ನು ಟ್ವೀಟರ್ ನಲ್ಲಿ ಟೀಕಿಸಿದ ನಟಿ ನೇಹಾ ದುಪಿಯಾ; ಮೋದಿ ಅಭಿಮಾನಿಗಳಿಂದ ಅಶ್ಲೀಲವಾಗಿ ಟೀಕೆ

Pinterest LinkedIn Tumblr

modi-neha

ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವೈಖರಿಯನ್ನು ಟ್ವೀಟರ್ ನಲ್ಲಿ ಟೀಕಿಸಿ ಮೋದಿ ಬೆಂಬಲಿಗರ ಕಮೆಂಟ್ ವಾರ್ ಗೆ ಗುರಿಯಾಗಿದ್ದ ನಟಿ ಶೃತಿ ಸೇಠ್, ಕವಿತಾ ಕೃಷ್ಣನ್ ಜತೆಗೆ ಮತ್ತೊಬ್ಬ ನಟಿ ನೇಹಾ ದುಪಿಯಾ ಸೇರ್ಪಡೆಯಾಗಿದ್ದಾರೆ.

ನಿನ್ನೆ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗಿದ್ದು, ಇದರಿಂದಾಗಿ ಮುಂಬೈ ಅಕ್ಷರ ಸಹ ನೀರಿನ ಹೊಂಡವಾಗಿದೆ. ರಸ್ತೆ ಸಂಚಾರ ಅಸ್ಥವ್ಯಸ್ತವಾಗಿದೆ. ಒಂದು ಮಳೆ ನಗರವನ್ನೇ ಸ್ಥಬ್ಧವಾಗಿಸಿದೆ. ಸೆಲ್ಫಿ ಹಾಗೂ ಯೋಗಗಳಿಂದ ಉತ್ತಮ ಆಡಳಿತ ನೀಡಲು ಸಾಧ್ಯವಿಲ್ಲ. ಸಾರ್ವಜನಿಕರ ಸುರಕ್ಷಿತೆಯೇ ಉತ್ತಮ ಆಡಳಿತ ಎಂದು ನೇಹಾ ದುಪಿಯಾ ಮೋದಿ ಸರ್ಕಾರದ ವಿರುದ್ಧ ಟ್ವೀಟಿಸಿದ್ದರು.

ಇದರಿಂದ ಕೆರಳಿದ ಮೋದಿ ಅಭಿಮಾನಿಗಳು ನೇಹಾ ಅವರ ವೈಯಕ್ತಿಕ ಬದುಕು, ವೃತ್ತಿ ಬದುಕು ಇತ್ಯಾದಿಗಳನ್ನು ಎಳೆದು ತಂದು ಅವರ ವಿರುದ್ಧ ಅಶ್ಲೀಲವಾಗಿ ಟೀಕೆಗಳನ್ನು ಮಾಡುತ್ತಿದ್ದಾರೆ.

ನಟಿ ಶುತಿ ಸೇಠ್ ಹಾಗೂ ನೇಹಾ ದುಪಿಯಾ ಅವರು ಸಿ ಗ್ರೇಡ್ ತಾರೆಯರು, ಇವರ ಮಾರ್ಕೆಟ್ ಕಡಿಮೆಯಾದಾಗ ರಾತ್ರೋರಾತ್ರಿ ನೇಮು ಫೇಮು ಪಡೆಯಲು ಈ ರೀತಿ ಟ್ವೀಟ್ ಗಳನ್ನು ಮಾಡುತ್ತಾರೆ ಎಂದು ಮೋದಿ ಅಭಿಮಾನಿಗಳು ಕಾಮೆಂಟ್ ವಾರ್ ಶುರು ಮಾಡಿದ್ದಾರೆ.

Write A Comment