ರಾಷ್ಟ್ರೀಯ

ತಾನು ಪ್ರೀತಿಸುತ್ತಿದ್ದ ಬಾಲಕಿಗೆ ಬಸ್‌ನಲ್ಲಿ ತಾಳಿ ಕಟ್ಟಿದ 35 ವರ್ಷದ ಭೂಪ! ಮುಂದೇನಾಯಿತು ನೀವೇ ಓದಿ…

Pinterest LinkedIn Tumblr

marriage

ಚೆನ್ನೈ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆಯೇ ಬಾಲಕಿಯೊಬ್ಬಳಿಗೆ 35 ವರ್ಷದ ವ್ಯಕ್ತಿಯೊಬ್ಬ ತಾಳಿ ಕಟ್ಟಿದ ಘಟನೆ ತಮಿಳುನಾಡಿನ ಮದುರೈ ಬಳಿ ಮಂಗಳವಾರ ನಡೆದಿದೆ.

ಮೇಲೂರ್‌ನಲ್ಲಿ ಸಾರಾಯಿ ಅಂಗಡಿಯೊಂದರಲ್ಲಿ ಕೆಲಸ ಮಾಡುವ ಕಲ್ಲನೈ ಎಂತಾದ ಅದೇ ಊರಿನಲ್ಲಿ 12ನೇ ತರಗತಿ ಓದುತ್ತಿದ್ದ ಬಾಲಕಿಯನ್ನು ಪ್ರೀತಿಸುತ್ತಿದ್ದ. ಆದರೆ ಈ 35 ವರ್ಷದವನ ಪ್ರೀತಿಯನ್ನು ಅಪ್ರಾಪ್ತ ವಯಸ್ಕ ಬಾಲಕಿ ಒಪ್ಪಿಕೊಂಡಿರಲಿಲ್ಲ.

ಇದರಿಂದ ಬೇಸರ ಮಾಡಿಕೊಂಡಿದ್ದ ಆತ, ಆ ಬಾಲಕಿ ತನ್ನ ಮನೆಯಿಂದ ಮೇಲೂರ್‌ಗೆ ಬರುವ ಬಸ್‌ಗೆ ಹತ್ತಿಕೊಂಡ. ಜೇಬಿನಲ್ಲೇ ಮಂಗಳಸೂತ್ರ ಇಟ್ಟುಕೊಂಡಿದ್ದ. ಬಸ್‌ನಲ್ಲಿ ಮೂರು ಗಂಟು ಹಾಕಲು ಅವಕಾಶ ಸಿಗುವುದಿಲ್ಲ ಎಂಬ ಕಾರಣಕ್ಕೆ ಮೊದಲೇ ಗಂಟು ಹಾಕಿ ಅದನ್ನು ಸರದ ರೀತಿ ಮಾಡಿಕೊಂಡಿದ್ದ! ಬಸ್ಸು ಮೇಲೂರ್‌ಗೆ ಹತ್ತಿರವಾಗುತ್ತಲೇ ಬಾಲಕಿ ಬಳಿ ಓಡಿ, ತಾಳಿಸರವನ್ನು ಆಕೆಯ ಕುತ್ತಿಗೆಗೆ ಹಾಕಿದ.

ಕೂಡಲೇ ಹುಡುಗಿ ಕಿರುಚಲು ಆರಂಭಿಸಿದಳು. ಬಸ್‌ನಲ್ಲಿದ್ದ ಇತರ ಪ್ರಯಾಣಿಕರು ಕಲ್ಲನೈನನ್ನು ಹಣ್ಣುಗಾಯಿ ನೀರುಗಾಯಿ ಮಾಡಿ ಪೊಲೀಸರಿಗೆ ಒಪ್ಪಿಸಿದರು. ಈಗ ಈ ಭಗ್ನಪ್ರೇಮಿಯನ್ನು ಮೇಲೂರ್‌ನ ಮಹಿಳಾ ಠಾಣೆಯಲ್ಲಿ ಮಹಿಳಾ ಪೋಲಿಸರು ‘ವಿಚಾರಿಸು’ತ್ತಿದ್ದಾರೆ.

Write A Comment