ರಾಷ್ಟ್ರೀಯ

ರಾಜೀವ್ ಹಂತಕರಿಗೆ ಕರುಣೆ ತೋರುವುದು ಬೇಡ: ಸುಪ್ರಿಂನಲ್ಲಿ ಕೇಂದ್ರದ ವಾದ

Pinterest LinkedIn Tumblr

rajiv-gandhiನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರಿಗೆ ಯಾವುದೇ ರೀತಿಯ ಕರುಣೆ ತೋರುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರದ ಪರ ವಕೀಲರು ಸುಪ್ರಿಂ ಕೋರ್ಟ್ ನಲ್ಲಿ ವಾದ ಮಂಡಿಸಿದ್ದಾರೆ.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಸೇರಿದಂತೆ 18 ಮಂದಿ ಸಾವಿಗೆ ಕಾರಣರಾದ ಹಂತಕರಿಗೆ ದಯೆ ತೋರುವುದು ಸರಿಯಲ್ಲ ಎಂದು ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್ ಹೇಳಿದ್ದಾರೆ.

ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಯಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ 7 ಅಪರಾಧಿಗಳನ್ನು  ಬಿಡುಗಡೆ ಮಾಡಲು ತಮಿಳುನಾಡು ಸರ್ಕಾರ ನಿರ್ಧರಿಸಿತ್ತು. ತಮಿಳುನಾಡು ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಕಾಂಗ್ರೆಸ್ ನೇತೃತ್ವದ ಮನಮೋಹನ್ ಸಿಂಗ್ ಸರ್ಕಾರ ಸುಪ್ರಿಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

1991 ರಲ್ಲಿ ಎಲ್ ಟಿಟಿಇ ಸಂಘಟನೆ ಉಗ್ರರು ತಮಿಳುನಾಡಿನಲ್ಲಿ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯನ್ನು ಸೂಸೈಡ್ ಬಾಂಬರ್ ಮೂಲಕ ಹತ್ಯೆ ಮಾಡಿದ್ದರು.

Write A Comment