ರಾಷ್ಟ್ರೀಯ

ಪುರಿ ಜಗನ್ನಾಥ ಯಾತ್ರೆ ವೇಳೆ ಕಾಲ್ತುಳಿತ: ಇಬ್ಬರು ಸಾವು

Pinterest LinkedIn Tumblr

puri-yatraಪುರಿ: ಮೊನ್ನೆ ಆಂಧ್ರಪ್ರದೇಶದ ಗೋದಾವರಿ ನದಿ ತೀರದಲ್ಲಿ ಮಹಾ ಪುಷ್ಕರದ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತಕ್ಕೆ ಹಲವು ಮಂದಿ ಸಾವಿಗೀಡಾಗಿರುವ ನೆನಪು ಮಾಸುವ ಮುನ್ನವೇ ಇಂದು ಒರಿಸ್ಸಾದ ಪುರಿ ಜಗನ್ನಾಥ ರಥ ಯಾತ್ರೆ ಸಂದರ್ಭದಲ್ಲಿಯೂ ಇಂತಹದ್ದೇ ಘಟನೆ ಮರುಕಳಿಸಿದೆ. ರಥ ಯಾತ್ರೆ ಸಮಯದಲ್ಲಿ ಉಂಟಾದ ಕಾಲ್ತುಳಿತಕ್ಕೆ ಇಬ್ಬರು ಸಾವಿಗೀಡಾಗಿದ್ದು, ಕನಿಷ್ಠ 15 ಮಂದಿ ಗಾಯಗೊಂಡಿದ್ದಾರೆ.

ಇಂದು ಬೆಳಗ್ಗೆ ಬಿಗಿ ಭದ್ರತೆ ನಡುವೆ ಜಗನ್ನಾಥ ದೇವರ ಶತಮಾನದ ಮೊದಲ ನಬಕಲೆಬಾರ್ ರಥ ಯಾತ್ರೆ ಆರಂಭಗೊಂಡಿತ್ತು. ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಈ ವೇಳೆ ಉಂಟಾದ ನೂಕು ನುಗ್ಗಲಿನಲ್ಲಿ ಸಾವು ಸಂಭವಿಸಿದೆ.

ಈಗಲೂ ಭಕ್ತರ ಉಲ್ಲಾಸ, ಉತ್ಸಾಹ ಮಾತ್ರ ಕಡಿಮೆಯಾಗಿಲ್ಲ. ಪುರಿಗೆ ಜನಸಾಗರವೇ ಹರಿದುಬರುತ್ತಿದೆ. ನಬಕಲೆಬಾರ್  ಅಂದರೆ ಜಗನ್ನಾಥ ದೇವರ ವಿಗ್ರಹದ ಶರೀರವನ್ನು ಬದಲಾಯಿಸುವುದು ಎಂದರ್ಥ.

Write A Comment