ರಾಷ್ಟ್ರೀಯ

ದೆಹಲಿಯಲ್ಲಿ ಆಮ್ ಆದ್ಮಿ ಕ್ಯಾಂಟಿನ್ ಆರಂಭ: ಕೇವಲ 5 ರೂಪಾಯಿಗೆ ಊಟದ ಸೌಲಭ್ಯ

Pinterest LinkedIn Tumblr

aapನವದೆಹಲಿ: ತಮಿಳುನಾಡಿನಲ್ಲಿ ಅಮ್ಮಾ ಕ್ಯಾಂಟಿನ್‌ನಂತೆ ದೆಹಲಿಯಲ್ಲೂ ಸಾಮಾನ್ಯ ಬಡಜನತೆಗಾಗಿ ಕ್ಯಾಂಟಿನ್ ಆರಂಭಿಸಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿರ್ಧರಿಸಿದ್ದು 5 ರೂಪಾಯಿಗಳಿಂದ 10 ರೂಪಾಯಿಗಳಲ್ಲಿ ಊಟ ದೊರೆಯಲಿದೆ ಎಂದು ಆಮ್ ಆದ್ಮಿ ಮೂಲಗಳು ತಿಳಿಸಿವೆ.

ಆರಂಭದಲ್ಲಿ ಕ್ಯಾಂಟಿನ್‌ಗಳನ್ನು ಕೈಗಾರಿಕೋದ್ಯಮ ಪ್ರದೇಶಗಳು, ಆಸ್ಪತ್ರೆ ಮತ್ತು ವಾಣಿಜ್ಯ ಕೇಂದ್ರಗಳಲ್ಲಿ ತೆರಯಲಾಗುವುದು. ಕ್ಯಾಂಟಿನ್‌‌ಗಳ ನಿರ್ವಹಣೆಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವಹಿಸಿಕೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಮಿಳುನಾಡಿನಲ್ಲಿರುವ ಆಮ್ಮಾ ಕ್ಯಾಂಟಿನ್‌‌ಗಳನ್ನು ಮಾದರಿಯಾಗಿರಿಸಿಕೊಂಡು ದೆಹಲಿ ಸರಕಾರ ಯೋಜನೆ ರೂಪಿಸಿದೆ ಎನ್ನಲಾಗಿದೆ.

ತಮಿಳುನಾಡಿನಲ್ಲಿ ಅಮ್ಮಾ ಕ್ಯಾಂಟಿನ್ ಭಾರಿ ಜನಪ್ರಿಯತೆಯನ್ನು ಪಡೆದಿದ್ದು, ಕ್ಯಾಂಟಿನ್‌ಗಳಲ್ಲಿ ಮೂರು ಬಾರಿ(ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ) ಉತ್ತಮ ಗುಣಮಟ್ಟದ ಆಹಾರ ಕಡಿಮೆ ದರದಲ್ಲಿ ದೊರೆಯುತ್ತದೆ.

ಅಮ್ಮಾ ಕ್ಯಾಂಟಿನ್‌ನಲ್ಲಿರುವಂತೆ ಸಾಂಬಾರ್ ರೈಸ್, ಮೊಸರನ್ನು , ಲೇಮನ್ ರೈಸ್, ಇಡ್ಲಿ ಮತ್ತು ಚಪಾತಿಗಳನ್ನು ಕಡಿಮೆ ದರದಲ್ಲಿ ನೀಡಲಾಗುವುದು ಎಂದು ದೆಹಲಿ ಸರಕಾರದ ಮೂಲಗಳು ತಿಳಿಸಿವೆ.

Write A Comment