ರಾಷ್ಟ್ರೀಯ

ಲೇಡಿಸ್ ಟಾಯ್ಲೆಟ್ ನಲ್ಲಿ ಮೊಬೈಲ್ ಇಟ್ಟಿದ್ದವನ ಅರೆಸ್ಟ್

Pinterest LinkedIn Tumblr

450Handcuffed-300x195ಥಾಣೆ: ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 25 ವರ್ಷದ ಯುವಕನೊಬ್ಬ ಮಹಿಳಾ ಶೌಚಾಲಯದಲ್ಲಿ ತನ್ನ ಮೊಬೈಲನ್ನು ವಿಡಿಯೋ ಮಾಡ್ ನಲ್ಲಿಟ್ಟು ಇದೀಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.

ನಿಲೇಶ್ ಶಿಂಧೆ ಎಂಬಾತ ಮಹಾರಾಷ್ಟ್ರದ ಥಾಣೆಯ ವಾಗ್ಲೆ ಇಂಡಸ್ಟ್ರಿಯಲ್ ಎಸ್ಟೇಟ್ ನಲ್ಲಿರುವ ಖಾಸಗಿ ಕಂಪನಿಯೊಂದರಲ್ಲಿ ಕಸ ಗುಡಿಸುವ ಕೆಲಸ ಮಾಡಿಕೊಂಡಿದ್ದನೆಂದು ಹೇಳಲಾಗಿದೆ. ಈತ ತನ್ನ ಮೊಬೈಲನ್ನು ವಿಡಿಯೋ ಮಾಡ್ ನಲ್ಲಿ ಮಹಿಳಾ ಶೌಚಾಲಯದಲ್ಲಿಟ್ಟಿದ್ದು  ಕಂಪನಿಯ ಮಹಿಳಾ ಸಿಬ್ಬಂದಿಯೊಬ್ಬರು ಅಡಗಿಸಿಟ್ಟಿದ್ದ ಮೊಬೈಲನ್ನು ಗಮನಿಸಿ ಕಂಪನಿಯ ಹಿರಿಯ ಅಧಿಕಾರಿಗಳ ಬಳಿ ದೂರು ಸಲ್ಲಿಸಿದ್ದಾರೆ.

ಮೊಬೈಲನ್ನು ವಶಕ್ಕೆ ಪಡೆದು ನೋಡಿದಾಗ ಅದು ನಿಲೇಶ್ ಶಿಂಧೆಗೆ ಸೇರಿದ್ದೆಂಬ ವಿಷಯ ಖಚಿತಪಟ್ಟಿದೆ. ಆತನನ್ನು ಕರೆಸಿ ವಿಚಾರಿಸಿದಾಗ ತಪ್ಪನ್ನು ಒಪ್ಪಿಕೊಂಡಿದ್ದು, ಬಳಿಕ ಶ್ರೀನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಿಲೇಶ್ ಶಿಂಧೆಯನ್ನು ಬಂಧಿಸಿ ಆತನ ವಿರುದ್ದ ವಿವಿಧ ಪ್ರಕರಣಗಳಡಿ ಮೊಕದ್ದಮೆ ದಾಖಲಿಸಿದ್ದಾರೆ.

Write A Comment