ರಾಷ್ಟ್ರೀಯ

ನಟಿಯ ಮೇಲೆ ಸಾಮೂಹಿಕ ಅತ್ಯಾಚಾರ : ಓರ್ವನ ಬಂಧನ; ತನ್ನ ಮುಂಬರುವ ಚಿತ್ರವೊಂದರ ಚಿತ್ರೀಕರಣಕ್ಕಾಗಿ ಬಂದಿದ್ದ ವೇಳೆ ನಡೆದ ಘಟನೆ

Pinterest LinkedIn Tumblr

rape

ಔರಂಗಬಾದ್‌: ಮರಾಠಿ ಚಿತ್ರರಂಗದ ನಟಿಯೋರ್ವಳ ಮೇಲೆ ಐವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ನಡೆದಿದ್ದು, ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮೂಲತಃ ಮುಂಬಯಿ ಉಪನಗರದ ನಿವಾಸಿಯಾಗಿರುವ ಮರಾಠಿ ನಟಿ ತನ್ನ ಮುಂಬರುವ ಚಿತ್ರವೊಂದರ ಚಿತ್ರೀಕರಣಕ್ಕಾಗಿ ಪೈಥಾನ್‌ಗೆ ಬಂದಿದ್ದರು. ಈ ವೇಳೆ ದುರುಳರು ಈ ದುಷ್ಕೃತ್ಯ ಎಸಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯೋರ್ವನನ್ನು ಬಂಧಿಸಿದ್ದಾರೆ.

ಮರಾಠಿಯಲ್ಲಿ ನಿರ್ಮಾಣವಾಗುತ್ತಿರುವ ಲಹಾನ್‌ಪನ್‌ ಮರಾಠಿ ಚಿತ್ರದ ಚಿತ್ರೀಕರಣಕ್ಕಾಗಿ ಭಾನುವಾರ ತನ್ನ ಸಂಭಾವನೆಯನ್ನು ಪಡೆಯಲು ಔರಂಗಬಾದ್‌ಗೆ ಬಂದಿದ್ದಳು. ತನ್ನ ಸಂಭಾವನೆಗಾಗಿ ಚಿತ್ರದ ನಿರ್ದೇಶಕರ ಸ್ನೇಹಿತ ನನ್ನು ಭೇಟಿಯಾಗಿದ್ದರು. ಆತ ಆಕೆಯನ್ನು ಫೈಥಾನ್‌ಗೆ ಕರೆದುಕೊಂಡಿ ಹೋಗಿ ತನ್ನ ನಾಲ್ವರು ಸ್ನೇಹಿತರೊಂದಿಗೆ ಸೇರಿ ನಟಿಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವುದಾಗಿ ಔರಂಗಾಬಾದ್‌ ಸ್ಥಳೀಯ ಕ್ರೈಂ ಬ್ರ್ಯಾಂಚ್‌ (ಗ್ರಾಮೀಣ) ಇನ್ಸ್‌ಪೆಕ್ಟರ್‌ ಕಾಂಚನ್‌ ಕುಮಾರ್‌ ಚಾಟೆ ತಿಳಿಸಿದರು.ಈ ಸಂಬಂಧ ಪೊಲೀಸರು ಚಿಟ್‌ಲಾಂಗೆಯನ್ನು ಬಂಧಿಸಿದ್ದು ಉಳಿದ ನಾಲ್ವರು ತಲೆಮರೆಸಿಕೊಂಡಿದ್ದಾರೆ.

Write A Comment