ರಾಷ್ಟ್ರೀಯ

ನಾಸಿಕ್ ನಲ್ಲಿ ಕುಂಭಮೇಳ ಆರಂಭ: ಸಾವಿರಾರು ಯಾತ್ರಿಕರಿಂದ ಪುಣ್ಯಸ್ನಾನ

Pinterest LinkedIn Tumblr

kumbha-melaನಾಸಿಕ್/ತ್ರ್ಯಂಬಕೇಶ್ವರ: ಬಹುದೊಡ್ಡ ಧಾರ್ಮಿಕ ಕಾರ್ಯಕ್ರಮ ಎನಿಸಿಕೊಂಡಿರುವ ಸಿಂಹಸ್ತ ಕುಂಭಮೇಳ ನಾಸಿಕ್ ನಲ್ಲಿ ಮಂಗಳವಾರ ವೈಭವಯುತವಾಗಿ ಆರಂಭಗೊಂಡಿದೆ.

ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳ ಮೇಘ ಮಾ ಸದಲ್ಲಿ ಸೂರ್ಯ ಮತ್ತು ಗುರು ಒಟ್ಟಿಗೆ ಬಂದಾಗ ನಡೆಯುತ್ತದೆ. ನಾಸಿಕ್ ನ ರಾಮಕುಂದ್ ನಲ್ಲಿ ಗೋದಾವರಿ ನದಿ ತೀರದಲ್ಲಿ ಇಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಚಾಲನೆ ನೀಡಿದರು.

ತ್ರ್ಯಂಭಕೇಶ್ವರದ ಕುಶ್ವರ್ತ ತೀರ್ಥದಲ್ಲಿ ನಡೆದ ಮತ್ತೊಂದು ಕುಂಭಮೇಳ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಿದರು. ಕುಂಭಮೇಳ ಆರಂಭದಂದು ಸುಮಾರು 1 ಕೋಟಿ ಯಾತ್ರಿಗರು ಮೊದಲ ಪುಣ್ಯಸ್ನಾನ ಮಾಡುವ ನಿರೀಕ್ಷೆಯಿದೆ. ಸಾಮಾನ್ಯ ಯಾತ್ರಿಗರು ಮಾತ್ರವಲ್ಲದೆ ಸಾವಿರಾರು ಸಾಧುಗಳು ಆಗಮಿಸಿದ್ದಾರೆ. ಕುಂಭಮೇಳದ ಪ್ರಯುಕ್ತ ಶೋಭಾಯಾತ್ರೆ ಕೈಗೊಳ್ಳಲಾಗಿದೆ.

ಮಹಾರಾಷ್ಟ್ರ ಸರ್ಕಾರ ಸಾಧುಗಳಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಿದೆ.

Write A Comment