ರಾಷ್ಟ್ರೀಯ

8 ದಿನದ ಮಗುವಿನ ಹೆಬ್ಬೆರಳನ್ನೇ ಕತ್ತರಿಸಿ ಹಾಕಿದ ನರ್ಸ್ ! ಕಸದ ಡಬ್ಬಿಗೆ ಹಾಕಿ ಪರಾರಿ….ಕತ್ತರಿಸಿದ್ದು ಏಕೆ …ಮುಂದೆ ಓದಿ

Pinterest LinkedIn Tumblr

baby

ಕೋಲ್ಕೋತಾ: 8 ದಿನದ ಮಗುವಿನ ಕೈಗೆ ಹಾಕಿದ್ದ ಬ್ಯಾಂಡೇಜ್‌ ತೆಗೆಯುವಾಗ ಅದರ ಹೆಬ್ಬೆರಳನ್ನೇ ಕತ್ತರಿಸಿ ಹಾಕಿರುವ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ ಸರಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ ನರ್ಸ್‌, ತುಂಡಾದ ಹೆಬ್ಬೆರಳನ್ನು ಕಸದ ಡಬ್ಬಿಗೆ ಹಾಕಿದ್ದಾರೆ. ಅತಿಸಾರದಿಂದ ನರಳುತ್ತಿದ್ದ ಮಗುವನ್ನು ಬಲುರ್‌ಘಾಟ್‌ನ ಜಿಲ್ಲಾ ಆಸ್ಪತ್ರೆಯ ನವಜಾತ ಶಿಶುಗಳ ನಿಗಾ ಕೇಂದ್ರಕ್ಕೆ ಜುಲೈ 6ರಂದು ದಾಖಲಿಸಲಾಗಿತ್ತು. ಸಲೈನ್‌ ನೀಡಲು ಮಗುವಿನ ಎಡಗೈಗೆ ಬ್ಯಾಂಡೇಜ್‌ ಹಾಕಲಾಗಿತ್ತು. ಮಗುವಿನ ಆರೋಗ್ಯ ಸುಧಾರಿಸಿದ ನಂತರ ಬ್ಯಾಂಡೇಜ್‌ ತೆಗೆಯಲು ಮುಂದಾದ ನರ್ಸ್‌, ಕಣ್ತಿಪ್ಪಿ ಮಗುವಿನ ಹೆಬ್ಬೆರಳನ್ನು ಕತ್ತರಿಸಿದ್ದರು.

‘ಮಗುವಿನ ಬೆರಳು ನೆಲದ ಮೇಲೆ ಬಿದ್ದಾಗ, ನಾನು ಚೀರಲಾರಂಭಿಸಿದೆ. ಕತ್ತರಿಯನ್ನು ತೊಳೆದ ನರ್ಸ್‌, ಬೆರಳನ್ನು ಕಸದ ಡಬ್ಬಿಗೆ ಹಾಕಿದರು. ತಕ್ಷಣ ಗಂಡನನ್ನು ಅಲ್ಲಿಗೆ ಕರೆದ, ಅಷ್ಟರಲ್ಲಿ ನರ್ಸ್‌ ಅಲ್ಲಿಂದ ಪರಾರಿಯಾದರು,’ ಎಂದು ಮಗುವಿನ ತಾಯಿ ತಿಳಿಸಿದ್ದಾರೆ.

ಹೆಬ್ಬೆರಳನ್ನು ಕತ್ತರಿಸಿ ಹಾಕಿದ ನರ್ಸ್‌ ವಿರುದ್ಧ ಮಗುವಿನ ಪೋಷಕರು ದೂರು ನೀಡಿದ್ದಾರೆ. ತಪ್ಪಿತಸ್ಥ ದಾದಿಯನ್ನು ಸೇವೆಯಿಂದ ವಜಾಗೊಳಿಸಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆದೇಶಿಸಿದ್ದಾರೆ.

Write A Comment