ರಾಷ್ಟ್ರೀಯ

ಬಾಲಕಿಗೆ ಬಟ್ಟೆ ಬಿಚ್ಚು ಎಂದು ಜೈಲು ಸೇರಿದ ಶಿಕ್ಷಕ

Pinterest LinkedIn Tumblr

54137096_untitled-1ಶಾಲಾ ಸಮವಸ್ತ್ರವನ್ನು ಹಾಕಿಕೊಂಡು ಬಾರದ ಬಾಲಕಿಯ ಬಟ್ಟೆ ಬಿಚ್ಚಿಸಿದ ಶಿಕ್ಷಕನೊಬ್ಬ ಜೈಲು ಪಾಲಾದ ಘಟನೆ ಲಾತೂರ್ ನಲ್ಲಿ ನಡೆದಿದೆ.

ಜಿಲ್ಲಾ ಪರಿಷತ್ ಶಾಲೆಯ ಶಿಕ್ಷಕನಾಗಿರುವ ಗಣಪತಿ ಲೋಕರೆ ಎಂಬಾತ ಶಾಲೆಯ ಸಮವಸ್ತ್ರ ಧರಿಸಿ ಬರದ ಬಾಲಕಿಗೆ ಬೈದು ಬಟ್ಟೆಯನ್ನು ತಂದು ತೋರಿಸುವಂತೆ ಸೂಚನೆ ನೀಡಿದ್ದ. ಅದರಂತೆ ಬಾಲಕಿ ಮನೆಗೆ ಹೋಗಿ ಸಮವಸ್ತ್ರವನ್ನು ತಂದಿದ್ದಾಳೆ. ಇದನ್ನರಿತ ಶಿಕ್ಷಕ ತನ್ನ ಎದುರೇ ಬಟ್ಟೆ ಬದಲಾಯಿಸುವಂತೆ ಬೆದರಿಕೆ ಹಾಕಿದ್ದಾನೆ.

ಮನೆಗೆ ತೆರಳಿದ ಬಾಲಕಿ ಶಿಕ್ಷಕನ ಕಿರುಕುಳದ ಕುರಿತು ತಿಳಿಸಿದ್ದು ಪೋಷಕರು ನೀಡಿದ ದೂರಿನ ಮೇರೆಗೆ ಪೊಲೀಸರು ಕಾಮುಕ ಶಿಕ್ಷಕನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Write A Comment