ಅಂತರಾಷ್ಟ್ರೀಯ

ನ್ಯೂಯಾರ್ಕ್: ಭಾರತೀಯನಿಗೆ ಹದಿನಾಲ್ಕು ವರ್ಷ ಜೈಲು

Pinterest LinkedIn Tumblr

jail

ನ್ಯೂಯಾರ್ಕ್, ಜು.10: ಭಾರತದಲ್ಲಿ ನೆಲೆಗೊಂಡಿರುವ ಕಾಲ್‌ಸೆಂಟರ್‌ಗಳನ್ನು ಗುರಿಯಾಗಿಸಿಕೊಂಡು ನಡೆಸಿರುವ ಅಕ್ರಮ ಹಣಕಾಸು ಪ್ರಕರಣಕ್ಕೆ ಸಂಬಂಧಿಸಿ ಭಾರತೀಯ ಅಮೆರಿಕನ್ ಪ್ರಜೆಯೋರ್ವನಿಗೆ 14 ವರ್ಷಗಳ ಜೈಲು ಶಿಕ್ಷೆ ತಿಳಿಸಿದೆ. ಸುಮಾರು 10 ಲಕ್ಷ ಪೌಂಡ್‌ಗಳ ದಂಡವನ್ನೂ ವಿಧಿಸಲಾಗಿದೆ. ಪ್ರಸಕ್ತ ಪೆನ್ಸಿಲ್ವೇನಿಯದಲ್ಲಿರುವ ಭಾರತೀಯ ಅಮೆರಿಕನ್ ಸಾಹಿಲ್ ಪಟೇಲ್ (36) ಶಿಕ್ಷೆಗೆ ಒಳಗಾದವರಿದ್ದಾರೆ.

ಭಾರತದಲ್ಲಿ ಸ್ಥಾಪಿಸಲ್ಪಟ್ಟಿರುವ ಕಾಲ್ ಸೆಂಟರ್‌ಗಳ ಮೂಲಕ ಅಮೆರಿಕದಲ್ಲಿ ಭಾರೀ ಹಣಕಾಸು ವಂಚನೆ ನಡೆಸಿರುವ ಆರೋಪಕ್ಕೆ ಸಂಬಂಧಿಸಿ ಸಾಹಿಲ್ ವಿರುದ್ಧ 2015ರ ಜನವರಿಯಲ್ಲಿ ದೂರು ದಾಖಲಿಸಿತ್ತು. ಪಟೇಲ್‌ಗೆ ಭಾರತದಲ್ಲಿರುವ ಅತನ ನಿಕಟವರ್ತಿಗಳು ಸಹಕರಿಸಿದ್ದರಲ್ಲದೆ, ಎಫ್‌ಬಿಐ ಹಾಗೂ ಆಂತರಿಕ ಕಂದಾಯ ಸೇವೆ(ಐಆರ್‌ಎಸ್) ಅಧಿಕಾರಿಗಳ ಸೋಗಿನಲ್ಲಿ ವರ್ತಿಸಿದ್ದರು ಎನ್ನಲಾಗಿದೆ.

Write A Comment