ರಾಷ್ಟ್ರೀಯ

ನಿರಂತರ 7 ತಿಂಗಳ ಕಾಲ ಸ್ವಂತ ತಂದೆ-ಮಲತಾಯಿಯ ಗೃಹ ಬಂಧನದಲ್ಲಿದ್ದು ಚಿತ್ರಹಿಂಸೆಗೊಳಗಾದ ಯುವತಿಯಾ ರಕ್ಷಣೆ

Pinterest LinkedIn Tumblr

tortur1

ಹೈದರಾಬಾದ್: ತಂದೆ ಹಾಗೂ ಮಲತಾಯಿಯಿಂದಲೇ 7 ತಿಂಗಳ ಕಾಲ ಹಲ್ಲೆಗೊಳಗಾಗಿ ಚಿತ್ರಿಹಿಂಸೆ ಅನುಭವಿಸುತ್ತಿದ್ದ ಯುವತಿಯೊಬ್ಬಳನ್ನು ಬಾಲ ಕಲ್ಯಾಣ ಇಲಾಖೆಯಿಂದ ರಕ್ಷಣೆಯಾಗಿರುವ ಘಟನೆಯೊಂದು ಬುಧವಾರ ಹೈದರಾಬಾದ್ ನಲ್ಲಿ ನಡೆದಿದೆ.

ಹಲ್ಲೆಗೊಳಗಾಗಿರುವ ಯುವತಿಯನ್ನು ಪ್ರತ್ಯುಷ(19) ಎಂದು ಹೇಳಲಾಗುತ್ತಿದ್ದು, ಯುವತಿಯ ಮೇಲೆ ತಂದೆ ಹಾಗೂ ಮಲತಾಯಿ 7 ತಿಂಗಳಕಾಲ ರೂಮಿನಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಬಾಲ ಕಲ್ಯಾಣ ಇಲಾಖೆಯಿಂದ ರಕ್ಷಣೆಗೊಂಡ ಯುವತಿಯು 7 ತಿಂಗಳಕಾಲ ಹಲ್ಲೆಗೊಳಗಾಗಿದ್ದು, ಪೋಷಕರ ವಿರುದ್ಧ ಯುವತಿ ದೂರು ದಾಖಲಿಸಿದ್ದಾಳೆ. ದೂರಿನಲ್ಲಿ ತಂದೆ ಹಾಗೂ ಮಲತಾಯಿ ಪ್ರತಿನಿತ್ಯಾ ಕ್ರೂರವಾಗಿ ನಡೆದುಕೊಳ್ಳುತ್ತಿದ್ದರು. ಪ್ರತಿನಿತ್ಯಾ ಕಬ್ಬಿಣ ರಾಡ್ ಕಾಯಿಸಿ ಹೊಡೆಯುತ್ತಿದ್ದರು. ಹಲವು ಬಾರಿ ಇಬ್ಬರೂ ನನ್ನ ಮೇಲೆ ಆ್ಯಸಿಡ್ ದಾಳಿಯೂ ಮಾಡಿದ್ದರು. ಅಲ್ಲದೆ, ಟಾಯ್ಲೆಟ್ ಕ್ಲೀನರ್ ನ್ನು ಕುಡಿಯುವಂತೆ ಹೇಳುತ್ತಿದ್ದರು ಎಂದು ಹೇಳಿದ್ದಾಳೆ.

ಏನಿದು ಪ್ರಕರಣ…?
ಸರಳ ಹಾಗೂ ರಮೇಶ್ ಎಂಬುವವರು ದಂಪತಿಗಾಳಾಗಿದ್ದು, ಇವರಿಗೆ ಪ್ರತ್ಯುಷ ಎಂಬ ಮಗಳಿದ್ದಳು. ದಾಪಂತ್ಯ ಸಮಸ್ಯೆಯಿಂದಾಗಿ ಈ ಇಬ್ಬರು ದಂಪತಿಗಳು 2003 ರಲ್ಲಿ ಬೇರೆಯಾಗಿದ್ದರು. ಇದರಂತೆ ಸರಳ ಮಗಳನ್ನು ಕರೆದುಕೊಂಡು ಬೇರೆಡೆ ವಾಸವಿದ್ದಳು. ಪತ್ನಿ ದೂರವಾಗುತ್ತಿದ್ದಂತೆ ರಮೇಶ್ ಚಾಮುಂಡೇಶ್ವರಿ ಎಂಬಾಕೆಯನ್ನು 2008ರಲ್ಲಿ ವಿವಾಹಗಿದ್ದ. 2010ರಲ್ಲಿ ಅನಾರೋಗ್ಯಕ್ಕೀಡಾಗಿ ಸರಳ ಸಾವನ್ನಪ್ಪಿದ್ದಳು. ಹೀಗಾಗಿ ಸಂಬಂಧಿಕರೊಬ್ಬರು ಪ್ರತ್ಯುಷಳನ್ನು ಅನಾಥಾಶ್ರಮದಲ್ಲಿ ಸೇರಿಸಿದ್ದರು. ಮರು ವಿವಾಹವಾಗಿದ್ದ ರಮೇಶ್ ಗೆ ಹಲವು ವರ್ಷಗಳು ಕಳೆದರೂ ಮಕ್ಕಳಾಗಿರಲಿಲ್ಲ. ಹೀಗಾಗಿ ಅನಾಥಾಶ್ರಮದಲ್ಲಿದ್ದ ಮಗಳು ಪ್ರತ್ಯುಷಳನ್ನು 2014ರ ಡಿಸೆಂಬರ್ ತಿಂಗಳಿನಲ್ಲಿ ಮನೆಗೆ ಕರೆತಂದಿದ್ದ. ದಿನಕಳೆದಂತೆ ಪ್ರತ್ಯುಷಳನ್ನು ಮನೆಯ ಆಳಾಗಿ ಮಾಡಿಕೊಂಡ ಮಲತಾಯಿ ಚಾಮುಂಡೇಶ್ವರಿ ಪ್ರಾಣಿಗಿಂತಲೂ ಕ್ರೂರವಾಗಿ ನಡೆದುಕೊಂಡಿದ್ದಾಳೆ.

ಮಲತಾಯಿ ಚಾಮುಂಡೇಶ್ವರಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದು, ಪ್ರತಿನಿತ್ಯ ಕಬ್ಬಿಣ ಕಾಯಿಸಿ ಯುವತಿಗೆ ಹೊಡೆಯುತ್ತಿದ್ದಳಂತೆ. ಪ್ರತ್ಯುಷಳ ಈ ಪರಿಸ್ಥಿತಿಯನ್ನು ನೋಡಿದ್ದ ಅಕ್ಕಪಕ್ಕದ ಮನೆಯವರು ಬಾಲ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿ ಬಾಲ ಕಲ್ಯಾಣ ಇಲಾಖೆಯ ಅಧಿಕಾರಿಗಳು ಯುವತಿ ಇದ್ದ ಮನೆಯ ಮೇಲೆ ದಾಳಿಮಾಡಿ, ಯುವತಿಯನ್ನು ರಕ್ಷಣೆ ಮಾಡಿದ್ದಾರೆ. ಯುವತಿ ದೇಹವು ಗಾಯಮಯವಾಗಿದ್ದು, ಅಸ್ವಸ್ಥಳಾಗಿರುವ ಕಾರಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಯುವತಿಯ ಪೋಷಕರ ವಿರುದ್ಧ ಎಲ್ ಬಿ ನಗರದ ಪೊಲೀಸರು ಸೆಕ್ಷನ್ 342 (ಅಕ್ರಮ ಬಂಧನ), 326 (ಮಾರಣಾಂತಿಕ ಹಲ್ಲೆ) 307 (ಕೊಲೆ ಯತ್ನ) ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ, ಮಲತಾಯಿ ಚಾಮುಂಡೇಶ್ವರಿಯನ್ನು ಬಂಧನಕ್ಕೊಳಪಡಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Write A Comment