ಕರ್ನಾಟಕ

ಪಬ್ ಮೇಲೆ ಸಿಸಿಬಿ ಪೊಲೀಸರ ದಾಳಿ : 26 ಯುವತಿಯರ ರಕ್ಷಣೆ, 16 ಮಂದಿ ಬಂಧನ

Pinterest LinkedIn Tumblr

ride

ಬೆಂಗಳೂರು, ಜು.9: ಮಹಿಳೆಯರನ್ನು ಕೆಲಸಕ್ಕಿಟ್ಟುಕೊಂಡು ಯಾವುದೇ ಡ್ರೆಸ್‌ಕೋಡ್ ಅನುಸರಿಸದೆ ಅಸಭ್ಯ ಉಡುಪುಗಳನ್ನು ತೊಡಿಸಿ ನೃತ್ಯ ಮಾಡಿಸುತ್ತಿದ್ದ ಕೋರಮಂಗಲದ ಬಾರ್‌ವೊಂದರ ಮೇಲೆ ದಾಳಿ ಮಾಡಿದ ಸಿಸಿಬಿ ಪೊಲೀಸರು 16 ಮಂದಿಯನ್ನು ಬಂಧಿಸಿ 26 ಯುವತಿಯರನ್ನು ರಕ್ಷಿಸಿದ್ದಾರೆ.

ಕೋರಮಂಗಲ 7ನೇ ಬ್ಲಾಕ್ 1ನೇ ಮುಖ್ಯರಸ್ತೆ ಮಾರುತಿ ಪ್ಲಾಜಾದಲ್ಲಿರುವ ದಾವತ್ ಪ್ಯಾಮಿಲಿ ರೆಸ್ಟೋರೆಂಟ್, ಬಾರ್ ಮತ್ತು ಪಬ್ ಮೇಲೆ ರಾತ್ರಿ ಸಿಸಿಬಿ ಪೊಲೀಸರು ದಾಳಿ ಮಾಡಿ 16 ಮಂದಿ ನೌಕರರನ್ನು ಬಂಧಿಸಿ 46 ಸಾವಿರ ರೂ. ನಗದು, ಹಾಗೂ ಎರಡು ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಉಡುಪಿಯ ಸತೀಶ್‌, ನವೀನ್, ಕೋಲಾರದ ಸಂದೀಪ್, ನಾಗಮಂಲದ ಮಂಜುನಾಥ್, ಪಾಂಡವಪುರದ ಮಹೇಶ್‌ಚಂದ್ರ, ಚನ್ನರಾಯಪಟ್ಟಣದ ಆನಂದ್, ಬಿಹಾರದ ವಿಮಲ್ ಮುಕಿಯ, ಶಿವಮೊಗ್ಗದ ಚೇತನ್, ಅಸ್ಸೊಂನ ರಶೀದ್, ಕೆ.ಆರ್.ಪೇಟೆಯ ಮಧು, ಬೆಂಗಳೂರಿನ ಲಿಂಗರಾಜು, ಶಿವಕುಮಾರ್, ಪ್ರಕಾಶ್, ಮಂಜೇಗೌಡ, ಹರಿತೇಶ್, ಮಂಜೇಗೌಡ ಬಂಧಿತರು.

ಈ ಪಬ್‌ನಲ್ಲಿ ಮಾಲೀಕರು ಮತ್ತು ವ್ಯವಸ್ಥಾಪಕರು ಮಹಿಳೆಯರನ್ನು ಕೆಲಸಕ್ಕಿಟ್ಟುಕೊಂಡು ಯಾವುದೇ ಡ್ರೆಸ್‌ಕೋರ್ಡ್ ಅನುಸರಿಸದೆ, ಗ್ರಾಹಕರಿಗೆ ಪ್ರಚೋದನೆ ನೀಡುವಂತಹ ಅಸಭ್ಯ ಉಡುಪುಗಳನ್ನು ಧರಿಸಿ ನೃತ್ಯ ಮಾಡಲು ಪೀಡಿಸುತ್ತಿದ್ದರು. ಇದನ್ನು ನಿರಾಕರಿಸಿದ ಯುವತಿಯರನ್ನು ಕೊಠಡಿಯೊಂದರಲ್ಲಿ ಕೂಡಿಹಾಕಿ ಪೊಲೀಸರಿಗೆ ವಿಷಯ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಸಿ ಅಕ್ರಮ ಬಂಧನಲ್ಲಿಟ್ಟಿದ್ದರು.

ಈ ಮಾಹಿತಿ ತಿಳಿದ ಸಿಸಿಬಿ ಪೊಲೀಸರು ಮಧ್ಯ ರಾತ್ರಿ 12ರಲ್ಲಿ ಪಬ್ ಮೇಲೆ ದಾಳಿ ಮಾಡಿ ನೊಂದ 26 ಯುವತಿಯರನ್ನು ರಕ್ಷಿಸಿದ್ದಾರೆ. ದಾಳಿ ವೇಳೆ ಬಾರ್ ಮಾಲೀಕ ಶಂಕರ್ ಶ್ರೀನಿವಾಸ್, ದಿನೇಶ್ ಶೆಟ್ಟಿ, ಮ್ಯಾನೇಜರ್ ಮೂರ್ತಿಕುಮಾರ್, ಕ್ಯಾಷಿಯರ್ ಹರೀಶ್, ಮ್ಯಾನೇಜರ್ ಉಮೇಶ್, ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಶಶಿಕಾಂತ್ ತಲೆ ಮರೆಸಿಕೊಂಡಿದ್ದಾರೆ. ಯುವತಿಯರನ್ನು ಹೊರ ರಾಜ್ಯದಿಂದ ಕರೆಸಿಕೊಂಡು ಪಬ್‌ನಲ್ಲಿ ಕೆಲಸಕ್ಕಿಟ್ಟುಕೊಂಡು ಪಬ್‌ನ ಮಾಲೀಕರು ಹೆಚ್ಚಿನ ಹಣ ಸಂಪಾದಿಸುತ್ತಿದ್ದುದು ಯುವತಿಯರ ವಿಚಾರಣೆಯಿಂದ ತಿಳಿದು ಬಂದಿದೆ. ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Write A Comment