ರಾಷ್ಟ್ರೀಯ

ಚಿನ್ನ ಪ್ರಿಯರಿಗೆ ಸಂತಸದ ಸುದ್ದಿ ! 26,000 ರೂ.ಗೆ ಇಳಿದ ಶುದ್ಧ ಚಿನ್ನ

Pinterest LinkedIn Tumblr

A customer tries on a gold necklace inside a jewellery showroom in Hyderabad
24,480 ರೂ.ಗೆ ತಗ್ಗಿದ ಆಭರಣ ಚಿನ್ನ / ಬಿಎಸ್‌ಇ ಸೂಚ್ಯಂಕ 484 ಅಂಕ ಪತನ / ರೂಪಾಯಿ 63.60ಕ್ಕೆ ಕುಸಿತ

ಹೊಸದಿಲ್ಲಿ: ಬಂಗಾರ ಪ್ರಿಯರಿಗೆ ಚಿನ್ನ ಖರೀದಿಸಲು ಇದು ಸಕಾಲ. ಏಕೆಂದರೆ ಬುಧವಾರದ ವಹಿವಾಟಿನಲ್ಲಿ ಚಿನ್ನದ ಬೆಲೆ 330 ರೂ. ಇಳಿಕೆ ಕಂಡು, ಪ್ರತಿ 10 ಗ್ರಾಂ 26,170 ರೂ.ಗೆ ತಗ್ಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ದುರ್ಬಲ ಪ್ರವೃತ್ತಿ ಕಂಡು ಬಂದ ಹಿನ್ನೆಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಆಭರಣ ವರ್ತಕರಿಂದ ಬೇಡಿಕೆ ವಿಮುಖವಾಗಿದ್ದೇ ಬೆಲೆ ಇಳಿಕೆಗೆ ಕಾರಣ.

ಬೆಳ್ಳಿ ಬೆಲೆಯಲ್ಲಿ ಗಣನೀಯ ಪ್ರಮಾಣದಲ್ಲಿ 1,550 ರೂ. ತಗ್ಗಿ, ಪ್ರತಿ ಕಿಲೋ 34,450 ರೂ.ಗೆ ಇಳಿಕೆ ಕಂಡಿದೆ. ಕೈಗಾರಿಕಾ ಘಟಕಗಳು ಮತ್ತು ನಾಣ್ಯ ತಯಾರಕರಿಂದ ಬೇಡಿಕೆ ಕುಸಿದಿದ್ದೇ ಬೆಲೆ ಇಳಿಕೆಗೆ ಕಾರಣ.

ಚಿನ್ನ ಮತ್ತು ಬೆಳ್ಳಿ ಬೆಲೆ ಕಳೆದ ಮೂರು ತಿಂಗಳಲ್ಲೇ ಮೊದಲ ಬಾರಿಗೆ ತೀವ್ರ ಇಳಿಕೆ ಆಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಮಾರ್ಚ್ ನಂತರ ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆ ಆಗಿದೆ. ಚೀನಾ ಷೇರು ಮಾರುಕಟ್ಟೆಯ ತೀವ್ರ ಕುಸಿತ ಮತ್ತು ಗ್ರೀಸ್ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಡಾಲರ್ ಮೌಲ್ಯ ಹಠಾತ್ ಚೇತರಿಕೆ ಕಂಡಿರುವುದೇ ಅತ್ಯಮೂಲ್ಯ ಲೋಹಗಳ ಬೆಲೆ ತಗ್ಗಲು ಪ್ರಮುಖ ಕಾರಣ ಎಂದು ವರ್ತಕರು ತಿಳಿಸಿದ್ದಾರೆ.

ದೇಶೀಯ ಬೆಲೆ ನಿಶ್ಚಯಿಸುವ ಜಾಗತಿಕ ಮಾರುಕಟ್ಟೆ ಸಿಂಗಾಪುರ್‌ನಲ್ಲಿ ಬುಧವಾರ ಪ್ರತಿ ಔನ್ಸ್ ಬಂಗಾರದ ಬೆಲೆ 1,147.39 ಡಾಲರ್‌ಗೆ ಕುಸಿದಿದೆ. ಅಂತೆಯೇ ಪ್ರತಿ ಔನ್ಸ್ ಬೆಳ್ಳಿ ಬೆಲೆ 14.81 ಡಾಲರ್‌ಗೆ ಇಳಿಕೆಯಾಗಿದೆ.

ಹೊಸದಿಲ್ಲಿ ಮಾರುಕಟ್ಟೆಯಲ್ಲಿ ಬುಧವಾರ 99.9 ಹಾಗೂ 99.5 ಶುದ್ಧತೆಯ ಚಿನ್ನ ಕ್ರಮವಾಗಿ 330 ರೂ. ಇಳಿಕೆ ಕಂಡು, 26,170 ರೂ ಹಾಗೂ 26,020 ರೂ.ಗೆ ಇಳಿಕೆ ಆಗಿದೆ. 8 ಗ್ರಾಂ ತೂಕದ ಸವರನ್ ಚಿನ್ನದ ಬಿಲ್ಲೆ 300 ರೂ. ಇಳಿದು, 23 ಸಾವಿರ ರೂ.ಗೆ ಕುಸಿದಿದೆ.

ವಾರದ ಆಧಾರದಲ್ಲಿ ವಿತರಣೆ ಆಗುವ ಬೆಳ್ಳಿ ಬೆಲೆಯಲ್ಲಿ 1,840 ರೂ. ತಗ್ಗಿ, ಪ್ರತಿ ಕಿಲೋ 34,160 ರೂ.ಗೆ ಕುಸಿದಿದೆ. ಬೆಳ್ಳಿ ನಾಣ್ಯಗಳ ಬೆಲೆಯಲ್ಲಿ 1 ಸಾವಿರ ರೂ. ಇಳಿದು, ಖರೀದಿಯ 100 ಬೆಳ್ಳಿ ನಾಣ್ಯ 53 ಸಾವಿರ ರೂ. ಹಾಗೂ ಖರೀದಿಯ 100 ಬೆಳ್ಳಿ ನಾಣ್ಯ 54 ಸಾವಿರ ರೂ.ಗೆ ತಗ್ಗಿದೆ.

Write A Comment