ರಾಷ್ಟ್ರೀಯ

ಖುಷಿಯಲ್ಲಿದೆ ಫಿಟ್ನೆಸ್

Pinterest LinkedIn Tumblr

15ಸುಂದರ ಹಾಗೂ ಆರೋಗ್ಯಪೂರ್ಣ ಜೀವನಕ್ಕೆ ದೇಹ ದಂಡನೆಯೇ ಪರಿಹಾರವಲ್ಲ. ಮನಸು ಕೂಡ ಲವಲವಿಕೆಯಿಂದ ಇರಬೇಕು. ಇವೆರಡನ್ನೂ ಹತೋಟಿಯಲ್ಲಿಟ್ಟುಕೊಂಡು ಸದಾ ಖುಷಿಯಾಗಿರಲು ನನಗೆ ನೆರವಾಗಿದ್ದು ನಾಟಕ, ನೃತ್ಯ, ಸಂಗೀತ.

ಯೋಗ, ನೃತ್ಯ, ಟ್ರೆಡ್‌ಮಿಲ್‌ಗಾಗಿ ಪ್ರತಿ ನಿತ್ಯ ಅರ್ಧ ಗಂಟೆ ಮೀಸಲಿಡುತ್ತೇನೆ. ವರ್ಕೌಟ್ ಜತೆ ಸೇವಿಸುವ ಆಹಾರ ಕೂಡ ಮುಖ್ಯ. ಅದಕ್ಕಾಗಿ ಊಟತಿಂಡಿಯಲ್ಲಿ ಕಟ್ಟುನಿಟ್ಟಾಗಿರುತ್ತೇನೆ. ತುಪ್ಪ, ಬೆಣ್ಣೆ, ಐಸ್‌ಕ್ರೀಂನಿಂದ ಸಾಧ್ಯವಾದಷ್ಟು ದೂರ ಇರುತ್ತೇನೆ. ತರಕಾರಿ ಅಂದ್ರೆ ಪ್ರಾಣ. ನನ್ನ ಆಹಾರದಲ್ಲಿ ಹೆಚ್ಚು ಹಸಿರು ತರಕಾರಿಗಳಿರುತ್ತವೆ. ಹೊರಗಡೆಯ ಆಹಾರ ಅಷ್ಟಕಷ್ಟೆ. ಹಾಗಂತ ತಿನ್ನುವುದೇ ಇಲ್ಲ ಅಂತಲ್ಲ, ಆದರೆ ಆರೋಗ್ಯಕ್ಕೆ ಪೂರಕವಾದದ್ದನ್ನೇ ತಿನ್ನುತ್ತೇನೆ.

ಪ್ರತಿ ಮೂರು ಗಂಟೆಗೊಮ್ಮೆ ಏನಾದರೂ ಆಹಾರ ಸೇವಿಸುತ್ತೇನೆ. ಆದರೆ ಕಮ್ಮಿ ಪ್ರಮಾಣದ ಆಹಾರವನ್ನು ಹೆಚ್ಚು ಬಾರಿ ಸೇವಿಸುವುದು ನನ್ನ ರೂಢಿ. ಹೊಟ್ಟೆ ತುಂಬ ತಿನ್ನುವುದು ಅಪರೂಪ. ಹಾಗಂತ ಅನಾರೋಗ್ಯಕರ ಡಯಟ್ ಪದ್ಧತಿಯನ್ನು ನಾನು ಅಳವಡಿಸಿಕೊಂಡಿಲ್ಲ. ಭಾರಿ ತೂಕವನ್ನು ಇಳಿಸುವುದು ಸುಲಭವಾಗಿರಲಿಲ್ಲ. ಆದರೆ ನಾನು ಅದನ್ನೇ ಸವಾಲಾಗಿ ತೆಗೆದುಕೊಂಡೆ. ವರ್ಕೌಟ್ ಮಾಡುವಾಗಲೆಲ್ಲ ಸೋಮಾರಿತನ ಆವರಿಸುತ್ತಿತ್ತು. ಆದರೆ ನಾನು ಅದನ್ನೇ ಎದುರಿಸಿ ನಿಂತೆ. ನಮ್ಮ ದೇಹದಲ್ಲಿ ದೈವ ಶಕ್ತಿಯೂ ಇರುತ್ತದೆ. ಸೈತಾನನೂ ಇರುತ್ತಾನೆ. ಆದರೆ ಆ ಸೈತಾನ ನಮ್ಮನ್ನು ನಕಾರಾತ್ಮಕವಾಗಿ ಪ್ರಚೋದಿಸುತ್ತಾನೆ. ಅವನಿಂದ ತಪ್ಪಿಸಿಕೊಳ್ಳಬೇಕು ಅಂದರೆ ಸಾಧಿಸುವ ಛಲ ಹುಟ್ಟಬೇಕು. ಅಂದರೆ ಫಿಟ್ನೆಸ್ ವಿಷಯಕ್ಕೆ ಬಂದರೆ ಯಾರೇನು ಹೇಳುತ್ತಾರೆ ಅನ್ನುವುದಕ್ಕಿಂತ ನಮಗೆ ನಮ್ಮ ದೇಹವನ್ನು ಆರೋಗ್ಯ ಪೂರ್ಣವಾಗಿ ಹಾಗೂ ಸುಂದರವಾಗಿಟ್ಟುಕೊಳ್ಳಬೇಕು ಅಂದೆನಿಸಬೇಕು. -ಸೀತಾ ಕೋಟೆ, ನಾಟಕ ಹಾಗೂ ನೃತ್ಯ ಕಲಾವಿದೆ.

Write A Comment