ರಾಷ್ಟ್ರೀಯ

ಬೊಜ್ಜಿಗೆ ಪರಿಹಾರ

Pinterest LinkedIn Tumblr

9* ಸುಮನಾ ಉಪಾಧ್ಯಾಯ

ದೇಹ ತೂಕ ಸ್ವಲ್ಪ ಹೆಚ್ಚಾದರೆ ಸಾಕು ಆತಂಕಗೊಂಡು ತೂಕವನ್ನು ಇಳಿಸಲು ನಾನಾ ಕಸರತ್ತುಗಳನ್ನು ಮಾಡುತ್ತೇವೆ. ಕೈಯಲ್ಲಿ ಸಾಕಷ್ಟು ಹಣವಿದ್ದರೆ ಜಿಮ್‌ಗಳಿಗೆ ಎಡತಾಕುತ್ತಾರೆ. ಇಲ್ಲವೇ ಬ್ಯೂಟ್‌ಪಾರ್ಲರ್‌ಗೆ ಹೋಗಿ, ಸೌಂದರ‌್ಯ ತಜ್ಞರನ್ನು, ವೈದ್ಯರನ್ನು ಸಂಪರ್ಕಿಸಿ ಅನೇಕ ಸಲಹೆಗಳನ್ನು ಪಡೆದು ಸಾವಿರಾರು ರೂಪಾಯಿ ಸುರಿಯುತ್ತಾರೆ. ಇನ್ನು ಕೆಲವರು ವಾಕಿಂಗ್, ಜಾಗಿಂಗ್, ವ್ಯಾಯಾಮ ಎಂದು ಕೆಲ ದಿನಗಳವರೆಗೆ ಮಾಡುತ್ತಾರೆ. ಅದನ್ನು ತಿಂಗಳುಗಟ್ಟಲೆ, ವರ್ಷಗಟ್ಟಲೆ ಮುಂದುವರಿಸಿ ದೇಹ ತೂಕವನ್ನು ಸಮತೋಲದಲ್ಲಿಟ್ಟುಕೊಳ್ಳುವವರು ಅಪರೂಪ.

ದೇಹದಲ್ಲಿ ಬೊಜ್ಜು ಉಂಟಾಗದಂತೆ, ತೂಕ ಹೆಚ್ಚಾಗದಂತೆ ನೋಡಿಕೊಳ್ಳಲು ಮನೆಯಲ್ಲಿಯೇ ಸರಳ ಪರಿಹಾರಗಳನ್ನು ಕಂಡುಕೊಳ್ಳಬಹುದು.

* ಹಿತಮಿತ ಆಹಾರ ಸೇವನೆಯೇ ಬೊಜ್ಜು ಬಾರದಂತೆ ನೋಡಿಕೊಳ್ಳಲು ಇರುವ ಮುಖ್ಯ ಪರಿಹಾರ. ನಾವು ಆಹಾರವನ್ನು ತಿನ್ನುತ್ತಿರುವಾಗ ಇನ್ನೂ ಸ್ವಲ್ಪ ಬೇಕು ಅನ್ನಿಸಿದಾಗ ತಿನ್ನುವುದನ್ನು ನಿಲ್ಲಿಸಬೇಕು.

* ಪದೇಪದೆ ಆಹಾರ ಸೇವನೆ ಒಳ್ಳೆಯದಲ್ಲ. ಬೆಳಗ್ಗಿನ ಉಪಹಾರವಾದ ಮೇಲೆ ಮಧ್ಯಾಹ್ನದ ಊಟ ಮಾಡಬೇಕು. ಮಧ್ಯೆ ಏನನ್ನೂ ತಿನ್ನಬಾರದು. ಆಗಾಗ ನೀರು ಕುಡಿಯುತ್ತಿದ್ದರೆಯದು.

* ಕಾಫಿ, ಟೀ ಸೇವಿಸದಿದ್ದರೆ ಉತ್ತಮ. ಸಂಜೆಯ ಹೊತ್ತು ಸಹ ಹೊಟ್ಟೆ ತುಂಬಾ ತಿನ್ನಬಾರದು. ರಾತ್ರಿ ಚಪಾತಿ, ಮೊಳಕೆ ಬಂದ ಕಾಳುಗಳು, ಹಸಿ ತರಕಾರಿ ಸೇವನೆ ಉತ್ತಮ. ಅನ್ನ ಸೇವನೆ ಕಡಿಮೆ ಮಾಡಿದರೆ ದೇಹದ ತೂಕ ಕಡಿಮೆಯಾಗುತ್ತದೆ. ಹೊರಗಡೆಯ ತಿಂಡಿ, ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಅಧಿಕವಾಗಿ ತಿನ್ನುವುದು ಒಳ್ಳೆಯದಲ್ಲ. ಖಾರ ಮತ್ತು ಉಪ್ಪಿನ ಅಂಶವನ್ನೂ ಆಹಾರ ಪದಾರ್ಥಗಳಲ್ಲಿ ಕಡಿಮೆ ಮಾಡಬೇಕು.

ವಾರದಲ್ಲಿ ಒಂದು ದಿನ ಉಪವಾಸ ಅಥವಾ ಹಸಿ ತರಕಾರಿ, ಹಣ್ಣು, ಕಾಳುಗಳನ್ನು ಮಾತ್ರ ತಿನ್ನುವುದರಿಂದ ಬೊಜ್ಜು ಅತಿಯಾಗಿ ಬೆಳೆಯು ವುದನ್ನು ಕಡಿಮೆ ಮಾಡಬಹುದು. ಬೊಜ್ಜು ರಣೆಯ, ದೇಹ ತೂಕವನ್ನು ಕಡಿಮೆ ಮಾಡುವ ಜಾಹೀರಾತುಗಳಿಗೆ ಮರುಳಾಗಬಾರದು. ಮನೆಯ ಸರಳ ಆಹಾರ ವನ್ನು ಹಿತಮಿತವಾಗಿ ಸೇವಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು.

Write A Comment