ರಾಷ್ಟ್ರೀಯ

ಹೇಮಾಮಾಲಿನಿ ಕಾರು ಅಪಘಾತ: ಮಾನವ ಹಕ್ಕು ಆಯೋಗದ ನೋಟಿಸ್

Pinterest LinkedIn Tumblr

hema

ಜೈಪುರ, ಜು.9: ಬಿಜೆಪಿ ಸಂಸದೆ ಹೇಮಾಮಾಲಿನಿ ಕಾರು ಅಪಘಾತ ಪ್ರಕರಣದ ಕುರಿತು ವಿವರವಾದ ವರದಿಯೊಂದನ್ನು ಸಲ್ಲಿಸುವಂತೆ ರಾಜಸ್ಥಾನ ರಾಜ್ಯ ಮಾನವ ಹಕ್ಕುಗಳ ಆಯೋಗವು ರಾಜ್ಯದ ಪೊಲೀಸರಿಗೆ ಮತ್ತು ಸ್ಥಳೀಯ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿದೆ.

ಈ ಅಪಘಾತದಲ್ಲಿ ನಾಲ್ಕು ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿದ್ದಳು. ಅಪಘಾತದಲ್ಲಿ ಗಾಯಗೊಂಡಿದ್ದ ಹೇಮಾಮಾಲಿನಿ ಜೊತೆಗೆ ತನ್ನ ಮಗಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದರೆ, ಆಕೆಯ ಜೀವ ಉಳಿಯುತ್ತಿತ್ತು ಎಂಬ ಅಭಿಪ್ರಾಯವನ್ನು ಬಾಲಕಿಯ ತಂದೆ ಹನುಮಾನ್ ಮಹಾಜನ್ ವ್ಯಕ್ತಪಡಿಸಿದ್ದರು.

ಈ ಹಿನ್ನೆಲೆಯಲ್ಲಿ ಅಪಘಾತದ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳನ್ನು ಗಣನೆಗೆ ತೆಗೆದುಕೊಂಡು ಆಯೋಗವು ಮಂಗಳವಾರ ನೋಟಿಸ್ ಜಾರಿ ಮಾಡಿದೆ. ‘ಅಪಘಾತದ ಸಂಬಂಧವಾಗಿ (ಮಾಧ್ಯಮ) ವರದಿಗಳನ್ನು ಗಣನೆಗೆ ತೆಗೆದುಕೊಂಡು ಜಿಲ್ಲಾ ಎಸ್‌ಪಿ ಮತ್ತು ಜಿಲ್ಲಾ ಸಿಎಂಎಚ್‌ಒಗೆ ನೋಟಿಸ್ ಜಾರಿಗೊಳಿಸಿ ವಿವರವಾದ ವರದಿಯೊಂದನ್ನು ಕೋರಿದ್ದೇವೆ’ ಎಂದು ಆಯೋಗದ ಸದಸ್ಯ ಎಂ.ಕೆ.ದೇವರಾಜನ್ ತಿಳಿಸಿದ್ದಾರೆ.

Write A Comment