ರಾಷ್ಟ್ರೀಯ

ಪಪ್ಪಾಯ face pack

Pinterest LinkedIn Tumblr

5

* ರೇಖಾ ಆರ್
ಎಲ್ಲಾ ಕಾಲದಲ್ಲೂ ಸಿಗುವ ಹಣ್ಣು ಪಪ್ಪಾಯ. ಇದರಲ್ಲಿ ವಿಟಮಿನ್ ಸಿ, ಎ, ಪೊಟ್ಯಾಶಿಯಂ ಮತ್ತು ಮೆಗ್ನೀಸಿಯಂ ಅಂಶವಿರುವುದರಿಂದ ಸರ್ವಕಾಲದ ಆರೋಗ್ಯಕರ ಹಣ್ಣು ಎನ್ನಲಾಗುತ್ತದೆ. ಇದು ತಿನ್ನಲು ಎಷ್ಟು ರುಚಿಯೋ ಅಷ್ಟೇ ದೇಹದ ಸೌಂದರ್ಯವನ್ನು ಹೆಚ್ಚಿಸುತ್ತದೆ.

ತ್ವಚೆಗೆ ಹೊಂದುವಂತಹ ಪಪ್ಪಾಯ ಫೇಸ್ ಪ್ಯಾಕ್ ಹಾಕಿ ಸತ್ತ ಜೀವಕೋಶಗಳನ್ನು ಹೊಗಲಾಡಿಸಿ ಮುಖದಲ್ಲಿ ಹೊಳಪು ಹೆಚ್ಚಿಸಿಕೊಳ್ಳಬಹುದು. ಹಾಗಾಗಿಯೇ ಬ್ಯೂಟಿಪಾರ್ಲರ್‌ಗಳಲ್ಲಿ ಹೆಚ್ಚಾಗಿ ಪಪ್ಪಾಯ ಹಣ್ಣಿನ ಫೇಸ್‌ಪ್ಯಾಕ್ ಮಾಡುತ್ತಾರೆ. ಯಾವುದೇ ಖರ್ಚಿಲ್ಲದೆ ನೀವೂ ಕೂಡಾ ಮನೆಯಲ್ಲಿಯೇ ಪಪ್ಪಾಯ ಫೇಸ್‌ಪ್ಯಾಕ್ ಮಾಡಬಹುದು.

* ಮಾಗಿದ ಪಪ್ಪಾಯ ಹಣ್ಣಿಗೆ ಒಂದು ಟೀ ಚಮಚ ಹಾಲು, ಜೇನನ್ನು ಚೆನ್ನಾಗಿ ಬೆರಸಿ ಮುಖ ಮತ್ತು ಕುತ್ತಿಗೆಗೆ ಹಚ್ಚಬೇಕು. 20 ನಿಮಿಷದ ನಂತರ ತಣ್ಣನೆಯ ನೀರಿನಲ್ಲಿ ಮುಖ ತೊಳೆಯಿರಿ. ನಿಮ್ಮ ಮುಖ ಕಾಂತಿಯೊಂದಿಗೆ ನಳನಳಿಸುತ್ತಿರುತ್ತದೆ.

* ಎರಡು ಟೀ ಚಮಚ ಮಾಗಿದ ಪಪ್ಪ್ಪಾಯ ಹಣ್ಣಿನ ರಸ ಮತ್ತು ಜೇನಿಗೆ ಅರ್ಧ ಚಮಚ ಗಂಧವನ್ನು ಮಿಕ್ಸ್ ಮಾಡಿ ಮುಖ ಮತ್ತು ಕುತ್ತಿಗೆಗೆ ಹಚ್ಚಿ. 20 ನಿಮಿಷದ ನಂತರ ತಣ್ಣನೆಯ ನೀರಿನಲ್ಲಿ ಮುಖ ತೊಳೆದರೆ ಮುಖ ಅಂದಗೊಳ್ಳುತ್ತದೆ.

* ಎರಡು ಚಮಚ ಪಪ್ಪಾಯ ಹಣ್ಣನ್ನು ಮುಲ್ತಾನಿ ಮಿಟ್ಟಿ ಬೆರಸಿ ಮುಖಕ್ಕೆ ಹಚ್ಚಿ ಒಣಗುವವರೆಗೆ ಬಿಟ್ಟು ನಂತರ ತೊಳೆಯಿರಿ. ಇದೇ ರೀತಿ ಪ್ರತಿದಿನ ಮಾಡುತ್ತಿದ್ದರೆ ಮೊಡವೆಗಳು ಕಡಿಮೆಯಾಗುತ್ತವೆ.

* ಎರಡು ಟೀ ಚಮಚ ಪಪ್ಪಾಯ ಹಣ್ಣಿನ ತಿರುಳಿಗೆ ಎರಡು ಚಮಚ ಆಲೋವಿರಾ ತಿರುಳನ್ನು ಬೆರಸಿ ಮುಖಕ್ಕೆ ಹಚ್ಚುವುದರಿಂದ ಎಣ್ಣೆಯ ಅಂಶ ಮತ್ತು ಒಣ ಚರ್ಮವನ್ನು ತೊಲಗಿಸುತ್ತದೆ.

* ಎರಡು ಟೀ ಚಮಚ ಪಪ್ಪಾಯ ಹಣ್ಣಿನ ರಸಕ್ಕೆ 10-12 ಹನಿ ನಿಂಬೆ ರಸ ಹಾಕಿ ಮುಖಕ್ಕೆ ಹಚ್ಚಿ 20 ನಿಮಿಷದ ನಂತರ ಬೆಚ್ಚನೆಯ ನೀರಿನಲ್ಲಿ ತೊಳೆಯುವುದರಿಂದ ಕಪ್ಪು ಕಲೆಗಳು ಮಾಯವಾಗುತ್ತವೆ.

Write A Comment