ರಾಷ್ಟ್ರೀಯ

ಬಿಹಾರ ಮಾಜಿ ಸಚಿವನಿಗೆ ಚೂರಿ ಇರಿತ: ಓರ್ವನ ಬಂಧನ

Pinterest LinkedIn Tumblr

knifeಪಾಟ್ನಾ: ಬಿಹಾರದ ಮಾಜಿ ಸಚಿವ ಎಜಾಝ್‌-ಉಲ್‌- ಹಕ್‌ ಮೇಲೆ ಪರಿಚಿತ ವ್ಯಕ್ತಿಯೊಬ್ಬ ಅವರ ನಿವಾಸದಲ್ಲೇ ದಾಳಿ ನಡೆಸಿದ ಘಟನೆ ನಡೆದಿದೆ.

ಘಟನೆಯಲ್ಲಿ ಎಜಾಝ್‌ ತೀವ್ರವಾಗಿ ಗಾಯಗೊಂಡಿದ್ದಾರೆ. ಎಜಾಝ್‌-ಉಲ್‌- ಹಕ್‌  ಅವರು ಈಗಾಗಲೇ ಜೈಲುಪಾಲಾಗಿರುವ ಕುಖ್ಯಾತ ರೌಡಿ–ರಾಜಕಾರಣಿ ಮಹಮ್ಮದ್‌ ಶಹಾಬುದ್ದೀನ್‌ ಅವರ ಬಾವ.

ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿ ರಾಘವೇಂದ್ರ ಸಿಂಗ್‌ ಎಂಬಾತನನ್ನು ಪೊಲೀಸರು ಬೋಜ್‌ಪುರ್‌ ಜಿಲ್ಲೆಯಿಂದ ವಶಕ್ಕೆ ಪಡೆದಿದ್ದಾರೆ. ಈ ದಾಳಿಯ ಹಿಂದಿನ ಉದ್ದೇಶ ಏನು ಎನ್ನುವುದರ ಕುರಿತು ತನಿಖೆ ನಡೆದಿದೆ ಎಂದು   ಪಾಟ್ನಾದ ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿ ವಿಕಾಸ್‌ ವೈಭವ್‌ ತಿಳಿಸಿದ್ದಾರೆ.

Write A Comment