ರಾಷ್ಟ್ರೀಯ

ಆಂಗ್ಲರಾಗದಿರಿ, ಮೊದಲು ಭಾರತೀಯರಾಗಿ: ರಾಜನಾಥ್

Pinterest LinkedIn Tumblr

RajnathSinghನೋಯ್ಡಾ: ಆಂಗ್ಲರಾಗಲು ಪ್ರಯತ್ನಿಸದಿರಿ, ಮೊದಲು ಭಾರತೀಯರಾಗಿ ಎಂದು ವಿದ್ಯಾರ್ಥಿಗಳಿಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸಲಹೆ ನೀಡಿದ್ದಾರೆ.

ಅವಶ್ಯವಿದ್ದಲ್ಲಿ ಮಾತ್ರ ಆಂಗ್ಲ ಭಾಷೆ ಬಳಸಿ. ಅದನ್ನೇ ಒಂದು ಫ್ಯಾಶನ್ ಎಂದುಕೊಂಡು ಆಂಗ್ಲರಾಗದಿರಿ. ಬೇಕಾದಲ್ಲಿ ಮಾತ್ರ ನಾವು ಆಂಗ್ಲ ಭಾಷೆ ಬಳಸಬೇಕೇ ಹೊರತು ನಮ್ಮ ದೇಶದ ಭಾಷೆಯನ್ನು ಕಡೆಗಣಿಸಬಾರದು ಎಂದು ಅವರು ಕಿವಿ ಮಾತು ಹೇಳಿದ್ದಾರೆ.

ನಾನು ಕೇವಲ ಹಿಂದಿ ಭಾಷೆಗೆ ಪ್ರಾಮುಖ್ಯತೆ ನೀಡಬೇಕು ಎಂದು ಹೇಳುತ್ತಿಲ್ಲ. ನಮ್ಮ ದೇಶದಲ್ಲಿ ಅನೇಕ ಭಾಷೆಗಳಿವೆ. ಅಲ್ಲಿನ ಜನತೆ ಆಯಾ ಮಾತೃ ಭಾಷೆಗಳನ್ನು ಉಳಿಸಿ ಬೆಳಸಬೇಕು. ಇತ್ತೀಚೆಗೆ ಆಂಗ್ಲ ಭಾಷೆಗೆ ಪ್ರಾಮುಖ್ಯತೆ ಕೊಡುತ್ತಾ, ಪ್ರಾದೇಶಿಕ ಭಾಷೆಗಳನ್ನು ಮರೆಯಲಾಗುತ್ತಿದೆ. ಈ ಮೂಲಕ ಮುಂದೊಂದು ದಿನ ನಮ್ಮ ಭಾಷೆಗಳ ಅಸ್ತಿತ್ವವೇ ಇಲ್ಲದಂತಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಐಟಿ ಕ್ಷೇತ್ರದಲ್ಲಿ ಭಾರತ ಮತ್ತಷ್ಟು ಅಭಿವೃದ್ಧಿ ಹೊಂದಬೇಕಿದೆ. ಇದಕ್ಕೆ ಯುವಜನತೆ ಕೊಡಗೆ ಬೇಕಾಗಿದೆ. ಭಾರತದ ಅಭಿವೃದ್ಧಿಯಲ್ಲಿ ಯುವಜನತೆ ಪಾತ್ರ ಪ್ರಮುಖ. ಇತ್ತೀಚೆಗೆ ಕೆಲ ಯುವಕರು ಭಯೋತ್ಪಾದಕರ ಗುಂಪಿಗೆ ಸೇರುತ್ತಿದ್ದಾರೆ. ವಿದ್ಯಾವಂತವರು, ಬುದ್ಧಿವಂತರು ಒಳ್ಳೆ ಕೆಲಸಕ್ಕಾಗಿ ತಮ್ಮನ್ನು ತೊಡಗಿಸಿಕೊಳ್ಳುವುದರ ಬದಲಾಗಿ, ಭಯೋತ್ಪಾಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಇಂತಹ ಘಟನೆಗಳನ್ನು ನಾವು ತಡೆಗಟ್ಟಬೇಕು. ವಿದ್ಯಾವಂತರಾಗುವುದರ ಜೊತೆಗೆ ಆ ವಿದ್ಯೆ ಬುದ್ಧಿಯನ್ನು ಒಳ್ಳೆ ಕೆಲಸಗಳಿಗೆ ಬಳಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

Write A Comment