ನವದೆಹಲಿ: ಚಿನ್ನದ ದರದಲ್ಲಿ ಹಠಾತ್ ಕುಸಿತ ಕಂಡಿದ್ದು, ಗ್ರಾಹಕರ ಮೊಗದಲ್ಲಿ ಸಂತಸ ಮೂಡಿಸಿದೆ. ಆಷಾಢ ಕಳೆದ ಬಳಿಕ ಶ್ರಾವಣದಲ್ಲಿ ವಿವಾಹ ಸಮಾರಂಭಗಳು ಆರಂಭವಾಗಲಿದ್ದು, ಇದಕ್ಕಾಗಿ ಚಿನ್ನ ಖರೀದಿಸಲು ಗ್ರಾಹಕರು ಮುಂದಾಗಿದ್ದಾರೆ.
ಚಿನ್ನ ಕಳೆದ ಮೂರು ತಿಂಗಳ ಹಿಂದಿನ ಮಟ್ಟಕ್ಕೆ ಮರಳಿದ್ದು, 10 ಗ್ರಾಂ ಚಿನ್ನಕ್ಕೆ 210 ರೂ. ಕಡಿಮೆಯಾಗುವ ಮೂಲಕ ಚಿನ್ನದ ದರ 26,500 ರೂ.ಗಳಿಗೆ ಬಂದು ನಿಂತಿದೆ. ಬೆಳ್ಳಿ ದರದಲ್ಲೂ ಪ್ರತಿ ಕೆ.ಜಿ. ಗೆ 300 ರೂ. ಗಳಷ್ಟು ಇಳಿಕೆಯಾಗಿದ್ದು 35,750 ರೂ. ತಲುಪಿದೆ.
ಕಳೆದ ಮೂರು ದಿನಗಳ ಹಿಂದಷ್ಟೇ ಚಿನ್ನದ ದರ ಏರಿಕೆಯಾಗಿದ್ದು, ಗ್ರೀಸ್ ನಲ್ಲಿ ಸದ್ಯ ತಲೆದೋರಿರುವ ಆರ್ಥಿಕ ಬಿಕ್ಕಟ್ಟೇ ಇದಕ್ಕೆ ಕಾರಣವೆಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಈಗ ಮತ್ತೆ ಚಿನ್ನದ ದರದಲ್ಲಿ ಇಳಿಕೆಯಾಗಿದ್ದು ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಕಡಿಮೆಯಾಗಬಹುದೆಂಬ ನಿರೀಕ್ಷೆಯಲ್ಲಿ ಗ್ರಾಹಕರಿದ್ದಾರೆ.