ವಡೋದರಾ: ಗ್ರಾಹಕರನ್ನು ಸೆಳೆಯಲು ಮಾಲೀಕರು ಥರಹೇವಾರಿಯಾಗಿ ತಮ್ಮ ರೆಸ್ಟೋರೆಂಟ್ ಆಲಂಕರಿಸುವುದನ್ನು ನೋಡಿದ್ದೇವೆ. ಆದರೆ ಈ ರೆಸ್ಟೋರೆಂಟಿನ ಮಾಲೀಕರು ಮಾತ್ರ ಇದಕ್ಕಾಗಿ ವಿಭಿನ್ನವಾದ ತಂತ್ರ ರೂಪಿಸಿದ್ದಾರೆ.
ಗುಜರಾತಿನ ವಡೋದರಾದಲ್ಲಿರುವ ‘ಲಾ ಪಿಜ್ಜಾ ಟ್ರೈನೋ’ ಮಾಲೀಕರು ತಮ್ಮ ಇಡೀ ರೆಸ್ಟೋರೆಂಟನ್ನು ರೈಲಿನ ಮಾದರಿಯಲ್ಲಿ ಮಾರ್ಪಾಡಿಸಿದ್ದಾರೆ. ಕಿಟಕಿಗಳ ಬಳಿ ಎಲ್ ಸಿ ಡಿ ಹಾಕಿಸಿದ್ದು, ಚಲಿಸುತ್ತಿರುವ ರೈಲಿನಲ್ಲಿ ಕುಳಿತ ವೇಳೆ ಯಾವ ಅನುಭವವಾಗುತ್ತದೋ ಅದೇ ಅನುಭವ ಈ ರೆಸ್ಟೋರೆಂಟಿಗೆ ಬರುವ ಗ್ರಾಹಕರಿಗಾಗುತ್ತದೆ.
ಎಲ್ಲಕ್ಕಿಂತ ಮತ್ತೊಂದು ವಿಶೇಷವೆಂದರೆ ಪಿಜ್ಜಾ ಆರ್ಡರ್ ಪಡೆಯಲು ಇಲ್ಲಿ ವೇಯ್ಟರ್ ಗಳು ಬರುವುದಿಲ್ಲ. ಬದಲಾಗಿ ಚಲಿಸುವ ಅಟಿಕೆ ರೈಲು ಬರುತ್ತದೆ. ಇದಕ್ಕಾಗಿ ರೆಸ್ಟೋರೆಂಟಿನಲ್ಲಿ ವಿಶೇಷ ಟ್ರ್ಯಾಕ್ ಸಿದ್ದಪಡಿಸಲಾಗಿದೆ. ಆರ್ಡರ್ ತೆಗೆದುಕೊಂಡ ಬಳಿಕ ಅಟಿಕೆ ರೈಲಿನಲ್ಲೇ ಪಿಜ್ಜಾ ನಿಮ್ಮ ಬಳಿ ಬರುತ್ತದೆ. ಈ ರೀತಿಯ ಪರಿಕಲ್ಪನೆಯೊಂದಿಗೆ ಭಾರತದಲ್ಲಿ ಆರಂಭಗೊಂಡ ಮೊದಲ ರೆಸ್ಟೋರೆಂಟ್ ತಮ್ಮದೆಂದು ಇದರ ಮಾಲೀಕ ಮನೀಷ್ ಪಟೇಲ್ ಹೆಮ್ಮೆಯಿಂದ ಹೇಳುತ್ತಾರೆ.