ರಾಷ್ಟ್ರೀಯ

ಭಾರೀ ಮಳೆಯಿಂದ ಭೂಕುಸಿತ : 30 ಸಾವು, 15 ಮಂದಿ ನಾಪತ್ತೆ

Pinterest LinkedIn Tumblr

LanSlide-1ಸಿಲಿಗುರಿ(ಪಂ.ಬಂ), ಜು.1-ಡಾರ್ಜಿಲಿಂಗ್ ಜಿಲ್ಲೆಯಾದ್ಯಂತ ಕಳೆದ ರಾತ್ರಿಯಿಂದಲೂ ಎಡಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸಂಭವಿಸಿದ ಭೂಕುಸಿತದಲ್ಲಿ 30 ಮಂದಿ ಸಜೀವ ಸಮಾಧಿಯಾಗಿದ್ದಾರೆ. ಅನೇಕ ಮನೆಗಳು ಜಖಂಗೊಂಡಿವೆ. ಜಿಲ್ಲೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ

ನಿನ್ನೆಯಿಂದ 25 ಭೂಕುಸಿತ ಪ್ರಕರಣಗಳು ಸಂಭವಿಸಿವೆ. 15ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದು ಅವರ ಗತಿ ಏನಾಗಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಧಾರಾಕಾರ ಮಳೆ, ಭೂಕುಸಿತ ಕಾರಣದಿಂದ ಡಾರ್ಜಿಲಿಂಗ್ ಮತ್ತು ಸಿಕ್ಕಿಂ ನಡುವಿನ ರಸ್ತೆ, ದೂರವಾಣಿ ಸಂಪರ್ಕಗಳು ಕಡಿತಗೊಂಡಿವೆ.

ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದೇ ರೀತಿ ಇತರ ಹಲವು ಪ್ರದೇಶಗಳಿಗೂ ಎಲ್ಲ ಸಂಪರ್ಕಗಳೂ ಕಡಿತಗೊಂಡಿವೆ. ರಾಷ್ಟ್ರೀಯ ಹೆದ್ದಾರಿ 10, 55 ಹಾಗೂ 55ಎ ರಸ್ತೆಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ.

Write A Comment