ರಾಷ್ಟ್ರೀಯ

ಬಯಲಾಯ್ತು ನಕಲಿ ನೋಟುಗಳ ರಹಸ್ಯ !

Pinterest LinkedIn Tumblr

4862fakecurrencyದೇಶಾದ್ಯಂತ ನಕಲಿ ನೋಟುಗಳ ಹಾವಳಿ ಹೆಚ್ಚುತ್ತಿದ್ದು ಈ ನಡುವೆ ಭಾರತಕ್ಕೆ ಪ್ರವೇಶಿಸುತ್ತಿರುವ ನಕಲಿ ನೋಟುಗಳ ಮಾರ್ಗದ ರಹಸ್ಯವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಎನ್​ಐಎ ಬಿಚ್ಚಿಟ್ಟಿದ್ದು ಅಚ್ಚರಿಗೆ ಕಾರಣವಾಗುವಂತೆ ಮಾಡಿದೆ.

ಹೌದು. ಎನ್​ಐಎ ನೀಡಿರುವ ಮಾಹಿತಿಯ ಪ್ರಕಾರ ಭಾರತದೊಳಗೆ ನಕಲಿ ನೋಟುಗಳ ಪ್ರವೇಶಕ್ಕೆ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆ ಹೆಬ್ಬಾಗಿಲು ಎನ್ನಲಾಗಿದ್ದು  ಬಾಂಗ್ಲಾದೇಶದ ಗಡಿಗೆ ಹೊಂದಿಕೊಂಡಂತಿರುವ ಮಾಲ್ಡಾ ಜಿಲ್ಲೆಯ ಗಡಿ ಭಾಗದಲ್ಲಿ ಗಡಿ ಭದ್ರತಾ ಪಡೆ ಸಿಬ್ಬಂದಿ ನಕಲಿ ನೋಟುಗಳನ್ನು ಹೊಂದಿದ್ದ ಕೆಲವು ಯುವಕರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈ ಮಾಹಿತಿ ಹೊರಬಿದ್ದಿದೆ.

ಅಲ್ಲದೇ ಚೆನ್ನೈ ಮತ್ತು ಹೈದಾಬಾದ್ ಮೂಲದವರಾಗಿದ್ದ ಬಂಧಿತರು ಕೊಟ್ಟ ಮಾಹಿತಿಯನ್ನು ಆಧರಿಸಿದ ಎನ್​ಐಎ ಅಧಿಕಾರಿಗಳು ಮಾಲ್ಡಾ ಮೂಲದ ಸೊವುಲ್, ಜಾನಿ ಶೇಖ್ ಮತ್ತು ಶೆಹಜಾನ್ ಎಂಬುವವರನ್ನು ವಿಚಾರಣೆಗೆ ಗುರಿಪಡಿಸಿದಾಗ, ಸುಮಾರು 1,500 ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ ನಕಲಿ ನೋಟುಗಳು ಇದೇ ಮಾರ್ಗದಲ್ಲಿ ಭಾರತದೊಳಗೆ ಪ್ರವೇಶಿಸಿರುವ ವಿಷಯ ಹೊರಬಂದಿದ್ದು ಭಾರತ ಹಾಗೂ ಬಾಂಗ್ಲಾ ಗಡಿಗಳಲ್ಲಿ ಅಂಗಡಿ ಇರಿಸಿಕೊಂದವರ ಮುಖಾಂತರ ಈ ನೋಟುಗಳನ್ನು ಭಾರತಕ್ಕೆ ಕಳುಹಿಸಿ ಕೊಡಲಾಗುತ್ತದೆ ಎನ್ನಲಾಗಿದೆ.

Write A Comment