ಮನೋರಂಜನೆ

ಫೇಸ್‍ ಬುಕ್ ಖಾತೆ ತೆರೆದ ರಾಹುಲ್ ದ್ರಾವಿಡ್

Pinterest LinkedIn Tumblr

5542rdravidಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಕರ್ನಾಟಕದ ಕುವರ ರಾಹುಲ್ ದ್ರಾವಿಡ್ ಸೋಮವಾರ ಸಂಜೆ ಫೇಸ್‍ ಬುಕ್ ಖಾತೆಯನ್ನುತೆರೆದಿದ್ದು ಈಗಾಗಲೇ ಆರು ಲಕ್ಷಕ್ಕಿಂತ ಹೆಚ್ಚು ಅಭಿಮಾನಿಗಳು ಅವರ ಪೇಜ್ ಅನ್ನು ಲೈಕ್ ಮಾಡುವ ಮೂಲಕ ತಮ್ಮ ಅಭಿಮಾನ ಪ್ರದರ್ಶಿಸಿದ್ದಾರೆ.

ಸಾಮಾಜಿಕ ಜಾಲತಾಣದಿಂದ ದೂರವಿದ್ದ ಕ್ರಿಕೆಟ್ ನ ಮಹಾಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ತಮ್ಮ ಖಾತೆ ಓಪನ್ ಮಾಡಿದ ಕೂಡಲೇ ಫೇಸ್‍ಬುಕ್ ಪೇಜ್ ಕ್ಲಿಕ್ ಆಗಿದ್ದು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ವಿಶೇಷವೆಂದರೆ ಇಲ್ಲಿಯವರೆಗೂ ರಾಹುಲ್ ದ್ರಾವಿಡ್ ವೆಬ್‍ಸೈಟ್ ಬಿಟ್ಟರೆ ಬೇರೆ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿರಲಿಲ್ಲ.ಹಾಗಾಗಿ  ಮೊದಲ ಬಾರಿಗೆ ಫೇಸ್‍ಬುಕ್ ಎಂಟ್ರಿ ನೀಡುವ ಮೂಲಕ ಅಭಿಮಾನಿಗಳಿಗೆ ತಮ್ಮಸಂದೇಶ ರವಾನಿಸಲಿದ್ದಾರೆ.

ತಮ್ಮ ಮೊದಲ ಪೋಸ್ಟ್ ಆಗಿ ವಿಡಿಯೋವನ್ನು ಅಪ್‍ಲೋಡ್ ಮಾಡಿರುವ ದ್ರಾವಿಡ್  ಇದರಲ್ಲಿ ನನ್ನ ತಂಡ ಈ ಪೇಜ್‍ನ್ನು ನಿಯಂತ್ರಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

Write A Comment