ರಾಷ್ಟ್ರೀಯ

ಕೇಜ್ರಿವಾಲ್‌ ನಿವಾಸದ ಏಪ್ರಿಲ್‌ -ಮೇ ತಿಂಗಳ ವಿದ್ಯುತ್‌ ಬಿಲ್‌ 91 ಸಾವಿರ ರೂಪಾಯಿ !

Pinterest LinkedIn Tumblr

kejrival

ನವದೆಹಲಿ (ಪಿಟಿಐ): ದೆಹಲಿ ಮುಖ್ಯಮಂತ್ರಿ ಹಾಗೂ ಎಎಪಿ ವರಿಷ್ಠ ಅರವಿಂದ್‌ ಕೇಜ್ರಿವಾಲ್‌ ಅವರ ನಿವಾಸದ ಏಪ್ರಿಲ್‌ ಮತ್ತು ಮೇ ತಿಂಗಳ ವಿದ್ಯುತ್‌ ಬಿಲ್‌ 91 ಸಾವಿರ ರೂಪಾಯಿ ಎಂದು ದೆಹಲಿ ಸರ್ಕಾರದ ಸಾಮಾನ್ಯ ಆಡಳಿತ ಇಲಾಖೆ ದಾಖಲೆ ಸಹಿತ ಮಾಹಿತಿ ನೀಡಿದೆ.

ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ನಿವಾಸದ ಎರಡು ತಿಂಗಳ ವಿದ್ಯುತ್‌ ಬಿಲ್‌ನ ಮಾಹಿತಿ ನೀಡುವಂತೆ ಇಲ್ಲಿನ ಸಾಮಾನ್ಯ ಆಡಳಿತ ಇಲಾಖೆಗೆ ಆರ್‌ಟಿಐ (ಮಾಹಿತಿ ಹಕ್ಕು) ಕಾರ್ಯಕರ್ತ ವಿವೇಕ್‌ ಗರ್ಗ್‌ ಅರ್ಜಿ ಸಲ್ಲಿಸಿದ್ದರು.

ಕೇಜ್ರಿವಾಲ್‌ ಮನೆಯಲ್ಲಿ ಎರಡು ವಿದ್ಯುತ್‌ ಮೀಟರ್‌ಗಳಿದ್ದು, ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ 91 ಸಾವಿರ ರೂಪಾಯಿ ಮೊತ್ತದ ವಿದ್ಯತ್‌ ಬಳಕೆಯಾಗಿದೆ ಎಂದು ಆಡಳಿತ ಇಲಾಖೆ ಮಾಹಿತಿ ನೀಡಿದೆ.

ಮುಖ್ಯಮಂತ್ರಿಗಳು ವಿದ್ಯತ್‌ ಬಿಲ್‌ 1 ಲಕ್ಷ ರೂಪಾಯಿಗೂ ಹೆಚ್ಚಿದೆ ಎಂದು ಬಿಜೆಪಿ ಆರೋಪಿಸಿದೆ. ದೆಹಲಿಯ ಎಲ್ಲಾ ಮಂತ್ರಿಗಳ ವಿದ್ಯುತ್‌ ಬಿಲ್‌ನ ಮಾಹಿತಿ ಪಡೆಯುವುದಾಗಿ ಬಿಜೆಪಿ ತಿಳಿಸಿದೆ.

Write A Comment