ರಾಷ್ಟ್ರೀಯ

ಸುಷ್ಮಾ ವಿರುದ್ದ ಯೂ ಟರ್ನ್ ಹೊಡೆದ ಆರ್​​ಎಸ್​ಎಸ್

Pinterest LinkedIn Tumblr

6693sushma swarajಐಪಿಎಲ್​ ಪ್ರಕರಣದ ಆರೋಪಿ ಲಲಿತ್ ಮೋದಿಗೆ ನೆರವು ವಿಚಾರಕ್ಕೆ ಸಂಬಂಧಿಸಿದಂತೆ ಆರ್​​ಎಸ್​ಎಸ್​ ಮುಖಂಡರು ಸುಷ್ಮಾ ಸ್ವರಾಜ್, ವಸುಂಧರಾ ರಾಜೇ ವಿರುದ್ಧ ತಿರುಗಿ ಬಿದ್ದಿದ್ದು ತಕ್ಷಣ ರಾಜೀನಾಮೆ ಪಡೆಯುವಂತೆ ಆಗ್ರಹಿಸಿದ್ದಾರೆ.

ಕೇಂದ್ರ ಸಚಿವೆ ಸುಷ್ಮಾ​ ಸ್ವರಾಜ್ ಪರ ನಿಂತಿದ್ದ  ಆರ್​​ಎಸ್​ಎಸ್​ ಮುಖಂಡರು ಇದೀಗ ಯೂಟರ್ನ್  ಹೊಡೆದಿದ್ದು ಸುಷ್ಮಾ ಸ್ವರಾಜ್ ಹಾಗೂ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆಗೆ ನೀಡುವಂತೆ ಆರ್​​ಎಸ್​ಎಸ್​ ಮುಖಂಡ ಗೋವಿಂದಾಚಾರ್ಯ ಪಟ್ಟು ಹಿಡಿದಿದ್ದಾರೆ.

ಬಿಜೆಪಿ ತನ್ನ ಘನತೆ ಕಾಪಾಡಿಕೊಳ್ಳಬೇಕು ಎಂದಾದರೆ ಸುಷ್ಮಾ ಹಾಗೂ ರಾಜೇ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲೇಬೇಕು. ಇಲ್ಲದಿದ್ದಲ್ಲಿ ಪಕ್ಷದ ಕುರಿತು ತಪ್ಪು ಸಂದೇಶ ರವಾನೆಯಾಗುವ ಸಾಧ್ಯತೆ ಇದ್ದು ಈ ಹಿನ್ನೆಲೆಯಲ್ಲಿ ಶೀಘ್ರವೇ ಅವರಿಬ್ಬರ ರಾಜೀನಾಮೆಯನ್ನು ಪಡೆಯುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೋವಿಂದಾಚಾರ್ಯ ತಮ್ಮ ಸಂದೇಶ ನೀಡಿದ್ದಾರೆ.

Write A Comment