ರಾಷ್ಟ್ರೀಯ

ಐಟಿಐ ಪ್ರವೇಶ ಪತ್ರದಲ್ಲಿ ನಾಯಿ ಫೋಟೋ !!

Pinterest LinkedIn Tumblr

3806ITI-admit-card-300x170ಹಸುವೊಂದು ವೃತ್ತಿ ಶಿಕ್ಷಣದ ಪ್ರವೇಶ ಪತ್ರ ಪಡೆದ ಸುದ್ದಿಯನ್ನು ಈ ಹಿಂದೆ ಕೇಳಿದ್ದೀರಿ. ಆದರೆ ಐಟಿಐ ಪ್ರವೇಶ ಪರೀಕ್ಷೆಗೆ ಹಾಜರಾಗಲು ಪ್ರವೇಶ ಪತ್ರ ಪಡೆಯುವಾಗ ವಿದ್ಯಾರ್ಥಿಯೊಬ್ಬನಿಗೆ ಆಘಾತವಾಗಿತ್ತು ಏಕೆ ಅಂತೀರಾ …? ಈ ಸ್ಟೋರಿ ಓದಿ.

ಹೌದು. ಕೊಲ್ಕತ್ತಾದಲ್ಲಿ ಈ ಘಟನೆ ನಡೆದಿದ್ದು ಸೌಮ್ಯದೀಪ್ ಮಹತೋ ಎಂಬ ವಿದ್ಯಾರ್ಥಿ ಐಟಿಐ ಪ್ರವೇಶ ಪರೀಕ್ಷೆಯ ಅಧಿಕೃತ ವೆಬ್‌ಸೈಟ್ ನಿಂದ ಪರೀಕ್ಷಾ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿದ್ದರು. ಆದರೆ ಉಳಿದೆಲ್ಲವೂ ಸರಿಯಿದ್ದರೂ ಸಹ ಪ್ರವೇಶ ಪತ್ರದಲ್ಲಿ ಆತನ ಫೋಟೋ ಬದಲಿಗೆ ನಾಯಿಯ ಫೋಟೊ ಇತ್ತು.

ಇದನ್ನು ನೋಡಿದ ವಿದ್ಯಾರ್ಥಿಗೆ ಶಾಕ್ ಆಗಿದ್ದು ತಕ್ಷಣ ಸಂಬಂಧಪಟ್ಟವರ ಗಮನಕ್ಕೆ ಆತ ತಂದಿದ್ದಾನೆ. ಶನಿವಾರ ಸಂಜೆ ಹೊಸ ಪ್ರವೇಶಪತ್ರವನ್ನು ಮಹತೋಗೆ ನೀಡಲಾಗಿದೆ. ಫೋಟೋ ಬದಲಾಗಿರುವ ಬಗ್ಗೆ ತನಿಖೆ ನಡೆಸಲು ಅಧಿಕಾರಿಗಳು ಆದೇಶಿಸಿದ್ದಾರೆ.

Write A Comment