ಕರ್ನಾಟಕ

ಮದುವೆಯಾಗ್ತೀನಿ ಎಂದು ರೇಪ್ ಮಾಡಿದರೆ ಅತ್ಯಾಚಾರವಲ್ಲ !!

Pinterest LinkedIn Tumblr

4306rape1ಮದುವೆಯ ಭರವಸೆ ನೀಡಿ ಲೈಂಗಿಕ ಕ್ರಿಯೆ ನಡೆಸುವುದು ಅಪರಾಧವಲ್ಲ, ಇದನ್ನು ಅತ್ಯಾಚಾರ ಎನ್ನುವುದು ಸಾಧ್ಯವಿಲ್ಲ ಎಂದು ಕರ್ನಾಟಕ ಉಚ್ಚನ್ಯಾಯಾಲಯ ಅಚ್ಚರಿಯ ತೀರ್ಪು ನೀಡಿದೆ.

ಮೈಸೂರಿನ ಮಹಿಳೆಯೊಬ್ಬರನ್ನು ಮದುವೆಯಾಗುವುದಾಗಿ ವ್ಯಕ್ತಿಯೊಬ್ಬರು ಲೈಂಗಿಕ ಸಂಬಂಧ ಇರಿಸಿಕೊಂಡಿದ್ದರು. ಈ ಕಾರಣದಿಂದ ಆಕೆ ಮಗುವಿಗೆ ಜನ್ಮವನ್ನೂ ನೀಡಿದ್ದಳು . ಆದರೆ ಈ ನಡುವೆ ಲೈಂಗಿಕ ಕ್ರಿಯೆ ಮ್ನದೆಸಿದ ವ್ಯಕ್ತಿ ಬೇರೊಬ್ಬಳನ್ನು ವಿವಾಹವಾಗಿದ್ದು ಈ ಹಿನ್ನೆಲೆಯಲ್ಲಿ ಸಂತ್ರಸ್ತ ಮಹಿಳೆ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ನಡೆಸಿದ್ದಾನೆ ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದಳು.

ವಿಶೇಷವೆಂದರೆ  ಆಕೆ ಈ ಹಿಂದೆ ಒಂದು ವಿವಾಹವಾಗಿದ್ದು, ಈ ಕಾರಣದಿಂದಲೇ ಮಗುವಾಗಿದೆ ಎನ್ನಲಾಗಿದೆ. ಅಲ್ಲದೆ ಗಂಡ ಆಕೆಯನ್ನು ಬಿಟ್ಟು ಹೋಗಿದ್ದರಿಂದ ರಮೇಶ್ ಆಕೆಯ ಕಷ್ಟಗಳಿಗೆ ನೆರವಾಗುವ ಮೂಲಕ ಆಕೆಗೆ ಹತ್ತಿರವಾಗಿದ್ದ . ಇದೇ ಇವರಿಬ್ಬರ ನಡುವೆ ದೈಹಿಕ ಸಂಬಂಧ ಬೆಳೆಯಲು ಕಾರಣವಾಗಿತ್ತು ಎನ್ನಲಾಗಿದೆ.

ಹಾಗಾಗಿ ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಈತ ಭರವಸೆ ನೀಡಿದ್ದ ಎಂಬುದನ್ನು ಒಪ್ಪದೇ ಇದನ್ನು ಅತ್ಯಾಚಾರ ಎಂದು ಹೇಗೆ ಪರಿಗಣಿಸಲು ಸಾಧ್ಯ ಎಂದು ಪ್ರಶ್ನಿಸಿದೆ. ಅಲ್ಲದೆ ಈ ಹಿಂದಿನ ಪ್ರಕರಣಗಳನ್ನು ಉಲ್ಲೇಖಿಸಿ ಆರೋಪಿಗೆ ಜಾಮೀನು ನೀಡಿದೆ.

Write A Comment