ರಾಷ್ಟ್ರೀಯ

ವರಿಷ್ಠರ ಭೇಟಿಗೆ ಸಿಗದ ಅವಕಾಶ: ಜೈಪುರಕ್ಕೆ ವಾಪಸಾದ ಸಿಎಂ ವಸುಂದರಾ ರಾಜೇ

Pinterest LinkedIn Tumblr

vasundara-rajeನವದೆಹಲಿ/ಜೈಪುರ: ಲಲಿತ್ ಮೋದಿ ಪ್ರಕರಣ ಸಂಬಂಧ ಬಿಜೆಪಿ ವರಿಷ್ಠರನ್ನು ಭೇಟಿಯಾಗಲು ಅವಕಾಶ ಸಿಗದ ಹಿನ್ನೆಲೆಯಲ್ಲಿ ರಾಜಸ್ತಾನ ಮುಖ್ಯಮಂತ್ರಿ ವಸುಂದರಾ ರಾಜೇ ಜೈಪುರಕ್ಕೆ ವಾಪಸಾಗಿದ್ದಾರೆ.

ನೀತಿ ಆಯೋಗ ಸಭೆಯಲ್ಲಿ ಭಾಗವಹಿಸಲು ಬಂದಿದ್ದ ವಸುಂದರಾ ರಾಜೇ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಅರುಣ್ ಜೈಟ್ಲಿ ಅವರನ್ನು ಭೇಟಿ ಮಾಡಲು ಉದ್ದೇಶಿಸಿದ್ದರು. ಆದರೆ ಈ ಮೂವರು ವಸುಂದರಾ ಅವರನ್ನು ಭೇಟಿ ಮಾಡಲು  ನಿರಾಕರಿಸಿದ ಕಾರಣ ವಸುಂದರಾ ರಾಜೇ ಜೈಪುರಕ್ಕೆ ವಾಪಾಸಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಸುಂದರಾ ರಾಜೇ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವಂತೆ ಎಲ್ಲೆಡೆಯಿಂದ ಒತ್ತಡ ಹೆಚ್ಚಾಗುತ್ತಿದೆ. ಆದರೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಸೇರಿದಂತೆ ಹಲವು ಹಿರಿಯ ಬಿಜೆಪಿ ನಾಯಕರು ಪ್ರಧಾನಿ ನರೇಂದ್ರ ಮೋದಿ ಬಳಿ ವಸುಂದರಾ ಅವರನ್ನು ಸಮರ್ಥಿಸಿಕೊಂಡು ಕ್ಲೀನ್ ಚಿಟ್ ನೀಡಿದ್ದಾರೆ ಎನ್ನಲಾಗಿದೆ.

Write A Comment