ರಾಷ್ಟ್ರೀಯ

ಸದ್ಯದಲ್ಲಿಯೇ ‘ನೆಟ್ ನ್ಯೂಟ್ರ್ಯಾಲಿಟಿ’ ವರದಿ: ರವಿಶಂಕರ್ ಪ್ರಸಾದ್

Pinterest LinkedIn Tumblr

ravi-prasadನವದೆಹಲಿ: ವಿವಾದಿತ ‘ನೆಟ್ ನ್ಯೂಟ್ರ್ಯಾಲಿಟಿ’ (net neutrality)ವಿಷಯಕ್ಕೆ ಸಂಬಂಧಿಸಿಂತೆ ಸರ್ಕಾರ ಸದ್ಯದಲ್ಲಿಯೇ ವರದಿ ಬಿಡುಗಡೆ ಮಾಡಲಿದೆ. ನಾವು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ವರದಿಗಾಗಿ ಕಾಯುತ್ತಿದ್ದೇವೆ ಎಂದು ಕೇಂದ್ರ ದೂರಸಂಪರ್ಕ ಖಾತೆ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

ನೆಟ್ ನ್ಯೂಟ್ರ್ಯಾಲಿಟಿ ವಿಷಯವನ್ನು ನೋಡಿಕೊಳ್ಳಲು ದೂರಸಂಪರ್ಕ ಇಲಾಖೆ ರಚಿಸಿದ್ದ ವಿಭಾಗವು ಈ ತಿಂಗಳ ಆರಂಭದಲ್ಲಿಯೇ ತನ್ನ ವರದಿಯನ್ನು ಇಲಾಖೆಗೆ ಸಲ್ಲಿಸಿತ್ತು.

ದೂರಸಂಪರ್ಕ ಪ್ರಾಧಿಕಾರದ ಅಧ್ಯಕ್ಷರ ಹೆಸರುಗಳನ್ನು ಸದ್ಯದಲ್ಲಿಯೇ ಘೋಷಿಸಲಾಗುವುದು ಎಂದು ರವಿಶಂಕರ್ ಪ್ರಸಾದ್ ತಿಳಿಸಿದರು.

ಏನಿದು ನೆಟ್ ನ್ಯೂಟ್ರಾಲಿಟಿ?:

ಇಂಟರ್ನೆಟ್ ಅಥವಾ ಅಂತರ್ಜಾಲ ಎಂಬ ಪರಿಕಲ್ಪನೆ, ಮಾಹಿತಿಯನ್ನು ಎಲ್ಲರಿಗೂ, ಎಲ್ಲಾ ವೇಳೆಯಲ್ಲಿಯೂ ಸಿಗುವಂತೆ ಮಾಡುವುದು.  ಕಾನೂನು ಬದ್ಧವಾಗಿರುವ ಮಾಹಿತಿಯನ್ನು ಯಾರು ಬೇಕಾದರೂ ಪಡೆದುಕೊಳ್ಳುವುದು. ಇಲ್ಲಿ ಶ್ರೀಮಂತ, ಬಡವ, ಜ್ಞಾನಿ-ಅಜ್ಞಾನಿ ಎಂಬ ಬೇಧಭಾವವಿಲ್ಲ. ಅಂತರ್ಜಾಲ ಸೇವೆ ಒದರಿಸುವ ಕಂಪೆನಿಗಳು(internet service providers-ISP) ಎಲ್ಲರಿಗೂ ಒಂದೇ ಕ್ರಮ(ಪ್ರಮಾಣದಲ್ಲಿ), ಒಂದೇ ವೇಗದಲ್ಲಿ ಇಂಟರ್ನೆಟ್  ಸೇವೆ ಒದಗಿಸಲು ಅನುಸರಿಸಬೇಕಾದ ರೀತಿಯನ್ನು ನೆಟ್ ನ್ಯೂಟ್ರ್ಯಾಲಿಟಿ ಎಂದು ಕರೆಯುತ್ತೇವೆ.

ನೆಟ್ ನ್ಯೂಟ್ರ್ಯಾಲಿಟಿ ಸಹಾಯದಿಂದ ಅಂತರ್ಜಾಲವನ್ನು ಸುಲಭವಾಗಿ ಉಪಯೋಗಿಸಿಕೊಳ್ಳಬಹುದು. ನಮ್ಮದೇ ವೆಬ್ ಸೈಟ್ ತೆರೆಯಬಹುದು. ವ್ಯಾಪಾರ ಮಾಡಬಹುದು, ಕೈ ತುಂಬಾ ಸಂಪಾದನೆ ಮಾಡಬಹುದು, ನಮ್ಮ ಆಲೋಚನೆ, ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು. ನೆಟ್ ನ್ಯೂಟ್ರ್ಯಾಲಿಟಿಯ ಪರಿಣಾಮವೇ ನಮ್ಮ ಕಣ್ಣಮುಂದೆ ಬೆಳೆದು ನಿಂತು ಅಗಾಧ ಪ್ರಭಾವ ಬೀರುತ್ತಿರುವ ಸಾಮಾಜಿಕ ಮಾಧ್ಯಮಗಳು.

ನೆಟ್ ನ್ಯೂಟ್ರ್ಯಾಲಿಟಿ ಇಲ್ಲದಿದ್ದರೆ?:

ನೆಟ್ ನ್ಯೂಟ್ರ್ಯಾಲಿಟಿಯಿಂದಾಗಿ ನಾವು ಇಷ್ಟು ಸುಲಭವಾಗಿ ಅಗ್ಗದ ದರದಲ್ಲಿ ನಮಗೆ ಬೇಕಾದ ವೆಬ್ ಸೈಟ್ ಗಳಿಗೆ ಭೇಟಿ ನೀಡಿ ಬೇಕಾದ ಮಾಹಿತಿ ಪಡೆಯುತ್ತೇವೆ. ಅದಿಲ್ಲದಿದ್ದರೆ ಇಂಟರ್ನೆಟ್ ಸೇವೆ ದುಬಾರಿಯಾಗಬಹುದು.

Write A Comment