ರಾಷ್ಟ್ರೀಯ

ಉದ್ಯೋಗ ಕೊಡಿಸುತ್ತೀನಿ ಎಂದು ಅತ್ಯಾಚಾರ ನಡೆಸಿದ ಕಾಮುಕ !

Pinterest LinkedIn Tumblr

84150

ಉದ್ಯೋಗ ಕೊಡಿಸುತ್ತೇನೆ ಎಂದು ಮಹಿಳೆಯೊಬ್ಬಳನ್ನು ನಂಬಿಸಿ ಕಾಮುಕನೊಬ್ಬ ನಿರಂತರವಾಗಿ ಅತ್ಯಾಚಾರ ನಡೆಸಿದ ಘಟನೆ ನಡೆದಿದೆ.

ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು ಇಲ್ಲಿನ ಈದ್ಗಾ ಪ್ರದೇಶದಲ್ಲಿನ ವನವಿಹಾರ ಕಾಲನಿಯಲ್ಲಿ ತನ್ನ ಮಗುವಿನ ಜತೆಗೆ ವಾಸವಾಗಿರುವ 30 ವರ್ಷದ ಮಹಿಳೆಯ ಮೇಲೆ ಮನೋಜ್‌ ಎಂಬಾತ ಅತ್ಯಾಚಾರವೆಸಗಿದ್ದಾನೆ.

ಮಹಿಳೆಗೆ ಉದ್ಯೋಗ ದೊರಕಿಸಿಕೊಡುವ ಭರವಸೆಯನ್ನು ನೀಡಿದ ಮನೋಜ್‌ ಆಕೆಯ ಮೇಲೆ ಕಳೆದ ಮೂರು ವರ್ಷಗಳಿಂದ ಅತ್ಯಾಚಾರ ಎಸಗುತ್ತಿದ್ದು ಆಕೆ ಉದ್ಯೋಗಕ್ಕಾಗಿ ಪಟ್ಟು ಹಿಡಿದಾಗ ದೈಹಿಕ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಈ ಕುರಿತು ಸಂತ್ರಸ್ತ ಮಹಿಳೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Write A Comment