ರಾಷ್ಟ್ರೀಯ

ಹಿರಿಯ ಪತ್ರಕರ್ತ ಪ್ರಫುಲ್ ಬಿದ್ವಾಯಿ ನಿಧನ

Pinterest LinkedIn Tumblr

?????????????ನವದೆಹಲಿ: ಹಿರಿಯ ಪತ್ರಕರ್ತ ಮತ್ತು ಖ್ಯಾತ ಅಂಕಣಕಾರ ಪ್ರಫುಲ್ ಬಿದ್ವಾಯಿ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬದ ಗೆಳೆಯರೊಬ್ಬರು ಬುಧವಾರ ತಿಳಿಸಿದ್ದಾರೆ. ಅವರಿಗೆ ೬೫ ವರ್ಷ ವಯಸ್ಸಾಗಿತ್ತು.

ಆಮ್ಸ್ಟೆರ್ಡ್ಯಾಮ್ ನ ಕೆಫೆಯೊಂದರಲ್ಲಿ ಉಪಹಾರ ಸೇವಿಸುವಾಗ ಹೃದಯಾಘಾತದಿಂದ ಮಂಗಳವಾರ ಸಂಜೆ ಮೃತಪಟ್ಟಿದ್ದಾರೆ ಎಂದು ತಿಳಿಯಲಾಗಿದೆ.

“ಕೆಫೆಯಲ್ಲಿ ಕುಳಿತು ಉಪಹಾರ ಸೇವಿಸುವಾಗ ಹೃದಯಾಘಾತದಿಂದ ನಿಧನ ಹೊಂದಿದರು” ಎಂದು ಅವರು ತಿಳಿಸಿದ್ದಾರೆ.

ಬಿದ್ವಾಯಿ ಬ್ರಹ್ಮಚಾರಿಯಾಗಿದ್ದರು ಮತ್ತು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

ಇವರ ಬಗ್ಗೆ ನೆನಪಿಸಿಕೊಂಡ ಫಿಲಿಪೋಸ್ “ಅವರು ದೇಶದಲ್ಲಿ ಧ್ವನಿಯಿಲ್ಲದವರ ಪರವಾಗಿ ಕೆಲಸ ಮಾಡಿದ ಪತ್ರಕರ್ತ ಮತ್ತು ಅತ್ಯುತ್ತಮ ಮನಸಿದ್ದವರು” ಎಂದಿದ್ದಾರೆ.

“ಅವರು ವಿಶ್ವದ ರಾಜಕೀಯವನ್ನು ಅತ್ಯುತ್ತಮವಾಗಿ ಅರ್ಥ ಮಾಡಿಕೊಂಡಿದ್ದರು” ಎಂದು ಕೂಡ ತಿಳಿಸಿದ್ದಾರೆ.

ಬಿದ್ವಾಯಿ ಅವರು ಸಮಾಜ ಶಾಸ್ತ್ರದ ಸಂಶೋಧಕ ಮತ್ತು ಮಾನವ ಹಕ್ಕುಗಳ, ಪರಿಸರದ, ಜಾಗತಿಕ ನ್ಯಾಯ ಮತ್ತು ಶಾಂತಿಯ ವಕ್ತಾರ ಮತ್ತು ಕಾರ್ಯಕರ್ತರಾಗಿದ್ದರು.

ದಕ್ಷಿಣ ಏಶಿಯಾದ ಬಗೆಗಿನ ಇವರ ಬರಹಗಳು ದ ಟೈಮ್ಸ್ ಆಫ್ ಇಂಡಿಯಾ, ಫ್ರಂಟ್ ಲೈನ್, ರಿಡಿಫ್.ಕಾಂ, ದ ಕಾಶ್ಮೀರ್ ಟೈಮ್ಸ್, ದ ಅಸ್ಸಾಂ ಟ್ರಿಬ್ಯೂನ್ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು. ಗಾರ್ಡಿಯನ್ ಪತ್ರಿಕೆಗೂ ಬರೆಯುತ್ತಿದ್ದ ಇವರು ಹಲವು ಪುಸ್ತಕಗಳ ಲೇಖಕರು ಕೂಡ.

Write A Comment