ರಾಷ್ಟ್ರೀಯ

ಒಂದಂಕಿ ಲಾಟರಿ ಹಗರಣದ ಪ್ರಮುಖ ಆರೋಪಿ ಸ್ಯಾಂಟಿಯಾಗೋ ಮಾರ್ಟಿನ್ ಪುತ್ರ ಬಿಜೆಪಿಗೆ ಸೇರ್ಪಡೆ

Pinterest LinkedIn Tumblr

martin-charlesನವದೆಹಲಿ: ರಾಜ್ಯದಲ್ಲಿ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಒಂದಂಕಿ ಲಾಟರಿ ಹಗರಣದ ಪ್ರಮುಖ ಆರೋಪಿ ಸ್ಯಾಂಟಿಯಾಗೋ ಮಾರ್ಟಿನ್ ಹಿರಿಯ ಪುತ್ರ ಚಾರ್ಲ್ಸ್ ಜೋಸ್ ಮಾರ್ಟಿನ್ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿರುವುದಾಗಿ ಬಯಲಾಗಿದೆ.

ಮಾಧ್ಯಮದ ವರದಿ ಪ್ರಕಾರ, ಲಾಟರಿ ಕಿಂಗ್ ಹಗರಣದ ಆರೋಪಿ ಸ್ಯಾಂಟಿಯಾಗೋ ಮಾರ್ಟಿನ್ ಪುತ್ರ ಚಾರ್ಲ್ಸ್ ಮಾರ್ಟಿನ್ ಚೆನ್ನೈನ ಬಿಜೆಪಿ ಕಚೇರಿಯಲ್ಲಿ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಅಲ್ಲದೇ ಚಾರ್ಲ್ಸ್ ಸೇರ್ಪಡೆಯನ್ನು ಬಿಜೆಪಿ  ಸಮರ್ಥಿಸಿಕೊಂಡಿದೆ. ಬಿಜೆಪಿ ಸೇರ್ಪಡೆಗಾಗಿ ಚಾರ್ಲ್ಸ್ ಮೂರು ತಿಂಗಳ ಹಿಂದೆ ಪಕ್ಷದ ಮುಖಂಡರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಏತನ್ಮಧ್ಯೆ, ಚೆನ್ನೈ ಬಿಜೆಪಿ ಘಟಕ ತಂದೆಯ(ಸ್ಯಾಂಟಿಯಾಗೋ ಮಾರ್ಟಿನ್) ಬಗ್ಗೆ ಗೊತ್ತಿಲ್ಲ, ಆದರೆ ಮಗನ ಮೇಲೆ ಯಾವುದೇ ಕೇಸಿಲ್ಲ ಎಂದು ಪ್ರತಿಕ್ರಿಯೆ ನೀಡಿದೆ.

ರಾಜ್ಯದಲ್ಲಿ ಬಹುಕೋಟಿ ಒಂದಂಕಿ ಲಾಟರಿ ಹಗರಣದ ತನಿಖೆಯನ್ನು ಬಿಜೆಪಿ, ಜೆಡಿಎಸ್ ಒತ್ತಡಕ್ಕೆ ಮಣಿದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಿಬಿಐ ತನಿಖೆಗೆ ವಹಿಸಿತ್ತು. ಬಹುಕೋಟಿ ಲಾಟರಿ ಹಗರಣದ ಆರೋಪಿ ಸ್ಯಾಂಟಿಯಾಗೋ ಮಾರ್ಟಿನ್ ಹೆಂಡತಿ ಲೀಮಾ ರೋಸ್ ಲೋಕಸಭಾ ಚುನಾವಣೆಗೂ ಮುನ್ನಾ ನರೇಂದ್ರ ಮೋದಿ ಜೊತೆ ಕೊಯಂಬತ್ತೂರಿನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ವೇದಿಕೆ ಹಂಚಿಕೊಂಡಿದ್ದರು.

ಸ್ಯಾಂಟಿಯಾಗೋ ಮಾರ್ಟಿನ್ ಕೇರಳದಲ್ಲಿ ನಡೆಸಿದ ಲಾಟರಿ ಹಗರಣದಲ್ಲಿ ಪ್ರಮುಖ ಆರೋಪಿಯಾಗಿದ್ದು, 32 ಪ್ರಕರಣಗಳು ದಾಖಲಾಗಿದೆ. ಅಲ್ಲದೇ ಸಿಬಿಐ ಈಗಾಗಲೇ ಆರೋಪಪಟ್ಟಿಯನ್ನು ಕೂಡಾ ದಾಖಲಿಸಿದೆ.

Write A Comment