ರಾಷ್ಟ್ರೀಯ

ಅತ್ಯಾಚಾರ ನಡೆಸಿದ ರಹಸ್ಯ ಬಿಚ್ಚಿಟ್ಟ ಯೋಗ ಗುರು!!

Pinterest LinkedIn Tumblr

71518535abc_bikram_choudhury_tk_121203_wmain

ವಿವಾದಾತ್ಮಕ ಯೋಗ ಗುರು ಬಿಕ್ರಮ್ ಚೌಧರಿ ತಮ್ಮ ವಿರುದ್ಧದ ಅತ್ಯಾಚಾರ ಆರೋಪಗಳನ್ನು ಸ್ಪಷ್ಟವಾಗಿ ನಿರಾಕರಿಸಿದ್ದು, ಕೆಲವು ಬಾರಿ ನಾನು ಅವರೊಂದಿಗೆ ಸೆಕ್ಸ್‌ಗೆ ಸಹಕರಿಸದೇ ಇದ್ದರೆ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎನ್ನುವ ಮೂಲಕ ಅಚ್ಚರಿಗೆ ಕಾರಣರಾಗಿದ್ದಾರೆ.

2013 ರಲ್ಲಿ ತನ್ನ ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದ ನಂತರ ಮೊದಲ ಬಾರಿಗೆ ಸಂದರ್ಶನ ನೀಡಿರುವ ಬಿಕ್ರಮ್ ಚೌಧರಿ, ‘ನಾನು ಎಂದಿಗೂ ಬಲವಂತವಾಗಿ ಹಲ್ಲೆ ನಡೆಸಿಲ್ಲ. ಆದರೆ ಸೆಕ್ಸ್‌ಗಾಗಿ ನನಗೆ ಹಲವು ಆಹ್ವಾನ ಬಂದಿದ್ದು ಅವರ ಮೇಲೆ ಹಲ್ಲೆ ನಡೆಸುವ ಅಗತ್ಯವೇ ಇಲ್ಲ ಎಂದು ತಿಳಿಸಿದ್ದಾರೆ.

ನನ್ನ ಯಾವುದೇ ಶಿಷ್ಯೆಯರೊಂದಿಗೆ ಅಥವಾ ಮಹಿಳೆಯರೊಂದಿಗೆ ಲೈಂಗಿಕ ಕ್ರಿಯೆ ನಡೆಸಬೇಕು ಎಂಬ ಉದ್ದೇಶ ನನಗೆ ಇಲ್ಲ. ಆದರೆ ನಾನು ಅವರೊಂದಿಗೆ ಸೇರಲಿಲ್ಲ ಎಂಬ ಕಾರಣಕ್ಕೆ ಕೆಲವು ಶಿಷ್ಯೆಯರು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಮನದಾಸೆಯನ್ನು ತೀರಿಸಿ ಜೀವ ಉಳಿಸುವ ನಿಟ್ಟಿನಲ್ಲಿ ನಾನು ಲೈಂಗಿಕ ಕ್ರಿಯೆ ನಡೆಸಬೇಕಾಯಿತು ಎಂದು ಬಿಕ್ರಮ್ ಸಿಂಗ್ ತಿಳಿಸಿದ್ದಾರೆ.

ವಿಶ್ವದಾದ್ಯಂತ ಯೋಗದ ಮೂಲಕ ಖ್ಯಾತರಾಗಿರುವ ಭಾರತೀಯ ಮೂಲದ 69 ವರ್ಷದ ಬಿಕ್ರಮ್ ಚೌಧರಿ ವಿರುದ್ಧ ಆರು ಮಹಿಳೆಯರು ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ತಮ್ಮ ದೂರಿನಲ್ಲಿ ಈ ಮಹಿಳೆಯರು ಬಿಕ್ರಮ್ ಚೌಧರಿ ಭಾರತ ಸೇರಿದಂತೆ ನಾನಾ ಕಡೆ ಅತ್ಯಾಚಾರ ನಡೆಸಿರುವುದಾಗಿ ವಿವರಿಸಿದ್ದನ್ನಿಲ್ಲಿ ಸ್ಮರಿಸಬಹುದಾಗಿದೆ.

Write A Comment