ರಾಷ್ಟ್ರೀಯ

ಸುನಂದಾ ಸಾವು: 6 ಆರೋಪಿಗಳನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಿದ ಎಸ್‌ಐಟಿ

Pinterest LinkedIn Tumblr

pushkar

ನವದೆಹಲಿ: ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ನಾಯಕ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ(ಎಸ್‌ಐಟಿ)ಆರು ಆರೋಪಿಗಳನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಿದೆ ಎಂದು ದೆಹಲಿ ಪೊಲೀಸ್ ಆಯುಕ್ತ ಬಿ.ಎಸ್.ಬಸ್ಸಿ ಅವರು ಹೇಳಿದ್ದಾರೆ.

‘ನಮ್ಮ ತನಿಖೆ ಮುಂದುವರೆಯುತ್ತಿದೆ. ತನಿಖೆಯ ವೇಳೆ, ಅವಶ್ಯವಿರುವ ಎಲ್ಲ ಪರೀಕ್ಷೆಗಳನ್ನು ನಡೆಸಲಾಗುವುದು ಮತ್ತು ನಾವು ಈಗಾಗಲೇ ಆರು ಆರೋಪಿಗಳನ್ನು ಸುಳ್ಳು ಪತ್ತೆ ಪರೀಕ್ಷೆ ಒಳಪಡಿಸಿದ್ದೇವೆ. ಇನ್ನು ಏನಾದರೂ ಅಗತ್ಯ ಇದ್ದರೆ ಬೇರೆ ಪರೀಕ್ಷೆಗಳನ್ನು ಮಾಡಲಾಗುವುದು’ ಎಂದು ಬಸ್ಸಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಪ್ರಕರಣದ ತನಿಖೆ ಮುಗಿಯುವವರೆಗೆ ಅಗತ್ಯವಿರುವ ಎಲ್ಲ ಪರೀಕ್ಷೆಗಳನ್ನು ನಡೆಸಲಾಗುವುದು ಎಂದಿರುವ ಬಸ್ಸಿ, ಸುಳ್ಳು ಪತ್ತೆ ಪರೀಕ್ಷೆಯ ವರದಿ ಇನ್ನು ಬಂದಿಲ್ಲ ಎಂದು ತಿಳಿಸಿದ್ದಾರೆ.

ಮೂವರು ಪ್ರಮುಖ ಆರೋಪಿಗಳಾದ ತರೂರ್ ಮನೆ ಕೆಲಸದಾತ ನಾರಾಯಣ ಸಿಂಗ್, ಡ್ರೈವರ್, ಭಜರಂಗಿ,  ಮತ್ತು ತರೂರ್ ಸ್ನೇಹಿತ ಸಂಜಯ್ ದೀವಾನ್ ಸೇರಿದಂತೆ ಆರು ಆರೋಪಿಗಳನ್ನು ಸುಳ್ಳು ಪತ್ತೆ ಪರೀಕ್ಷೆ ಒಳಪಡಿಸಲಾಗಿದೆ.

Write A Comment