ರಾಷ್ಟ್ರೀಯ

ಎಲ್‌ಪಿಜಿ ಸಬ್ಸಿಡಿ ಬಿಟ್ಟುಕೊಟ್ಟವರು ಶೇ 0.35

Pinterest LinkedIn Tumblr

LPG-subbb

ನವದೆಹಲಿ (ಪಿಟಿಐ): ಎಲ್‌ಪಿಜಿ ಸಬ್ಸಿಡಿ ಬಿಟ್ಟುಕೊಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಭಿಯಾನ ಆರಂಭಿಸಿದ ಮೂರು ತಿಂಗಳು ಕಳೆದರೂ ಸಬ್ಸಿಡಿ ಬಿಟ್ಟುಕೊಟ್ಟಿರುವವರು ಶೇಕಡಾ 0.35ರಷ್ಟು ಮಂದಿ ಮಾತ್ರ.

ಕಳೆದ ವಾರ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ವಿಷಯ ಬೆಳಕಿಗೆ ಬಂದಿದೆ.

15.3 ಕೋಟಿ ಎಲ್‌ಪಿಜಿ ಬಳಕೆದಾರರ ಪೈಕಿ 5.5 ಲಕ್ಷ ಮಂದಿ ಮಾತ್ರ ಸಬ್ಸಿಡಿ ಬಿಟ್ಟುಕೊಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಸದರು, ಶಾಸಕರು, ಸರ್ಕಾರಿ ನೌಕರರು ಸೇರಿದಂತೆ ಹಲವು ಹೆಚ್ಚಿನ ಸಂಖ್ಯೆಯಲ್ಲಿ ಸಬ್ಸಿಡಿ ಬಿಟ್ಟುಕೊಡಬಹುದೆಂಬ ನಿರೀಕ್ಷೆ ಇತ್ತು. ಆದರೆ, ಇದುವರೆಗೆ ಹಲವು ಸಂಸದರು, ಶಾಸಕರು, ಹಿರಿಯ ಸರ್ಕಾರಿ ಅಧಿಕಾರಿಗಳೇ ಸಬ್ಸಿಡಿ ಬಿಟ್ಟುಕೊಟ್ಟಿಲ್ಲ ಎಂದು ಪೆಟ್ರೋಲಿಯಂ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Write A Comment