ರಾಷ್ಟ್ರೀಯ

ಹಳೆಯ ನೋಟುಗಳ ಬದಲಾವಣೆಗೆ ಜೂ.30 ಕಡೆ ದಿನ

Pinterest LinkedIn Tumblr

notes

ನವದೆಹಲಿ,ಜೂ.21: ಸಾರ್ವಜನಿಕರೇ ಗಮನಿಸಿ. ನಿಮ್ಮಲ್ಲಿರುವ 2005ಕ್ಕೂ ಹಿಂದಿನ 1,000 ಮತ್ತು 500 ರೂ. ನೋಟುಗಳನ್ನು ಬದಲಾಯಿಸಿಕೊಳ್ಳಲು ಕೇವಲ 10 ದಿನಗಳು ಮಾತ್ರ ಬಾಕಿ ಇದ್ದು , ಈ ಅವಧಿ ಜೂ.30ಕ್ಕೆ ಅಂತ್ಯವಾಗಲಿದೆ. 2005ರ ಪೂರ್ವ ಕರೆನ್ಸಿ ನೋಟುಗಳನ್ನು ಹಿಂದಕ್ಕೆ ತೆಗೆದುಕೊಳ್ಳಲು ಸಾರ್ವಜನಿಕರ ಸಹಕಾರಕ್ಕಾಗಿ ವಿನಂತಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಜೂ.30ರೊಳಗಾಗಿ ನಿಮ್ಮಲ್ಲಿರುವ 1,000 ಹಾಗೂ 500 ರೂ. ನೋಟುಗಳನ್ನು ನಿಮ್ಮ ಸಮೀಪದ ಬ್ಯಾಂಕ್‌ಗಳಲ್ಲಿ ಜಮಾ ಮಾಡಿ ಅಥವಾ ಬದಲಾಯಿಸಿಕೊಳ್ಳಿ ಎಂದು ಸೂಚಿಸಿದೆ.

ಈ ಮೊದಲು ಆರ್‌ಬಿಐ 2015ರ ಜನವರಿ 1ನೇ ತಾರೀಖು ಅಂತಿಮ ಎಂದು ಹೇಳಿತ್ತು. ಆನಂತರ ಜನತೆಯ ಅನುಕೂಲಕ್ಕಾಗಿ ಈ ತಿಂಗಳ 30ರ ವರೆಗೆ ಈ ಅವಧಿಯನ್ನು ವಿಸ್ತರಿಸಿದೆ.

2005ರ ಪೂರ್ವ ಮುದ್ರಿತ ನೋಟುಗಳನ್ನು ಗುರುತಿಸುವುದು ಕಷ್ಟದ ಕೆಲಸವೇನಲ್ಲ. ಆ ಹಳೆಯ ನೋಟುಗಳ ಹಿಂಬದಿಯಲ್ಲಿ ಮುದ್ರಣದ ವರ್ಷವನ್ನು ಮುದ್ರಿಸಿರುವುದಿಲ್ಲ. 2005ರ ನಂತರದ ನೋಟುಗಳ ಕೆಳಭಾಗದಲ್ಲಿ ಮುದ್ರಿತ ವರ್ಷವನ್ನು ನಮೂದಿಸಲಾಗಿರುತ್ತದೆ. ಹಳೆಯ ಸರಣಿ ನೋಟುಗಳನ್ನು ಹಿಂಪಡೆಯಲು ಅನುಸರಿಸುವ ಸರಳ ವಿಧಾನವಾಗಿದೆ ಎಂದು ಆರ್‌ಬಿಐ ಹೇಳಿದೆ. ಖೋಟಾ ನೋಟು ಚಲಾವಣೆ ನಿಯಂತ್ರಣಕ್ಕೆ ಈ ಯೋಜನೆ ರೂಪಿಸಲಾಗಿದೆ.

Write A Comment