ರಾಷ್ಟ್ರೀಯ

ಸ್ಥಳೀಯ ಚುನಾವಣೆಗಳಲ್ಲಿ ಮತದಾನವನ್ನು ಕಡ್ಡಾಯಗೊಳಿಸುತ್ತಿರುವ ಗುಜರಾತ್ ಸರ್ಕಾರ

Pinterest LinkedIn Tumblr

ttt

ಗಾಂಧೀನಗರ್: ಸ್ಥಳೀಯ ಚುನಾವಣೆಗಳಲ್ಲಿ ಮತದಾನವನ್ನು ಕಡ್ಡಾಯಗೊಳಿಸಿದ ಪ್ರಥಮ ರಾಜ್ಯವೆಂಬ ಹೆಗ್ಗಳಿಕೆಗೆ ಗುಜರಾತ್ ಪಾತ್ರವಾಗಲಿದ್ದು, ಕಡ್ಡಾಯ ಮತದಾನ ಮಸೂದೆಯ ನಿಯಮಗಳನ್ನು ಶೀಘ್ರದಲ್ಲಿಯೇ ಪ್ರಕಟಿಸುವ ಕುರಿತು ಮುಖ್ಯಮಂತ್ರಿ ಆನಂದಿ ಬೆನ್ ಸೂಚನೆ ನೀಡಿದ್ದಾರೆ.

ಅಕ್ಟೋಬರ್‌ನಲ್ಲಿ 253 ಪುರಸಭೆ, 208 ತಾಲೂಕು ಪಂಚಾಯತ್, 26 ಜಿಲ್ಲಾ ಪಂಚಾಯತ್ ಮತ್ತು ಆರು ಮುನ್ಸಿಪಲ್ ಕಾರ್ಪೋರೇಶನ್‌ಗಳಿಗಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಕಡ್ಡಾಯ ಮತದಾನ ಮಸೂದೆ ಅನುಷ್ಠಾನಗೊಳಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ.

ರಾಜ್‌ಕೋಟ್‍ನಲ್ಲಿ ನಡೆದ ಸಮಾರಂಭವೊಂದರಲ್ಲಿ ಭಾಗವಹಿಸಿದ ಬಳಿಕ ಮಾತನಾಡುತ್ತಿದ್ದ ಪಟೇಲ್,  ಕಡ್ಡಾಯ ಮತದಾನ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ವ್ಯವಸ್ಥೆ ಮಾಡಿಕೊಂಡಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸುಮಾರು 70% ನಡೆಯುತ್ತಿದೆ. ಕಡ್ಡಾಯ ಮತದಾನ ನಿಯಮ ಜಾರಿಗೆ ಬಂದಿದ್ದೇ ಆದರೆ ಇದು ಪ್ರತಿಶತ 90ನ್ನು ದಾಟುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಗುಜರಾತ್ ರಾಜ್ಯಪಾಲರು ಕಳೆದ ವರ್ಷ ನಾಗರಿಕ ಚುನಾವಣೆಯಲ್ಲಿ ಕಡ್ಡಾಯ ಮತದಾನ, ತಪ್ಪಿದರೆ ಶಿಕ್ಷೆಗೊಳಪಡಿಸುವ ನಿಯಮಗಳಿದ್ದ ಗುಜರಾತ್ ಸ್ಥಳೀಯ ಪ್ರಾಧಿಕಾರಗಳ ನಿಯಮಗಳ(ತಿದ್ದುಪಡಿ) ಮಸೂದೆ 2011 ಕ್ಕೆ  ಅನುಮೋದನೆಯನ್ನು ನೀಡಿದ್ದರು. ವಿರೋಧ ಪಕ್ಷ ಕಾಂಗ್ರೆಸ್‌ನ ಪ್ರಬಲ ಪ್ರತಿಭಟನೆ ಮಧ್ಯೆ ಮಸೂದೆ ಅಂಗೀಕೃತಗೊಂಡಿತ್ತು.

Write A Comment