ರಾಷ್ಟ್ರೀಯ

ಯೋಗ ದಿನಾಚರಣೆ ಆಚರಿಸಲು ನಿರಾಕರಿಸಿದ ಉತ್ತರಾಖಂಡ್ ಸಿಎಂ

Pinterest LinkedIn Tumblr

utt

ರಾಂಚಿ: ಸಂಪೂರ್ಣ ದೇಶ ಯೋಗ ದಿನಾಚರಣೆ ನಡೆಸಲು ಸಿದ್ಧತೆ ನಡೆಸುತ್ತಿದ್ದರೆ, ಉತ್ತರಾಖಂಡ ಸರ್ಕಾರ ಯೋಗಾ ದಿನಾಚರಣೆಯಿಂದ ದೂರ ಉಳಿಯಲು ನಿರ್ಧರಿಸಿದೆ.

ಯೋಗ ಕಾರ್ಯಕ್ರಮಗಳನ್ನು ನಡೆಸುವ ಬದಲು ಜೀವನಪದ್ಧತಿಯ ಜತೆ ಸಾಂಪ್ರದಾಯಿಕ ಅಭ್ಯಾಸವನ್ನು ಸಂಪರ್ಕಿಸುವ ಉದ್ದೇಶದಿಂದ ನಿಯಮಾವಳಿ ಕರಡನ್ನು ರಚಿಸುವುದರ ಕುರಿತು ಚರ್ಚಿಸಲು ಯೋಗ ಶಿಬಿರಗಳನ್ನು ನಡೆಸಲು ಸರ್ಕಾರ ಚಿಂತಿಸಿದೆ.

“ಸಾರ್ವಜನಿಕರ ಬಳಿ ಯೋಗ ಮಾಡಿ ಎನ್ನುವ ಬದಲಿಗೆ, ಯೋಗ ಬೋಧಕರ ಒಳಿತಿಗಾಗಿ ಏನಾದರೂ ಮಾಡಲು ನಾನು ನಿರ್ಧರಿಸಿದ್ದೇನೆ”, ಎಂದಿರುವ ಉತ್ತರಾಖಂಡದ ಮುಖ್ಯಮಂತ್ರಿ ಹರೀಶ್ ರಾವತ್  ಯೋಗ ಪ್ರಚಾರದಲ್ಲಿ ತಾವು ಭಾಗವಹಿಸಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.

ಈ ಘೋಷಣೆ ರಾಜ್ಯದ ಬಿಜೆಪಿಯನ್ನು ಕೆರಳಿಸಿದ್ದು, ಇದು ‘ಕಾಂಗ್ರೆಸ್‌ನ ಕೀಳು ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ’, ಎಂದು ಕೇಸರಿ ಪಕ್ಷ ಆಡಳಿತಾರೂಢ ಪಕ್ಷವನ್ನು ಜರಿದಿದೆ.

Write A Comment