ಅಂತರಾಷ್ಟ್ರೀಯ

ರಮಾದಾನ್: ಸದ್ಭಾವನೆ ದ್ಯೋತಕವಾಗಿ 113 ಮೀನುಗಾರರನ್ನು ಬಿಟ್ಟ ಪಾಕಿಸ್ತಾನ

Pinterest LinkedIn Tumblr

ishermen

ಕರಾಚಿ (ಪಿಟಿಐ): ಸದ್ಭಾವನೆ ದ್ಯೋತಕವಾಗಿ ಪಾಕಿಸ್ತಾನವು ಇಲ್ಲಿನ ಜೈಲಿನಲ್ಲಿದ್ದ 113 ಭಾರತೀಯ ಮೀನುಗಾರರನ್ನು ಗುರುವಾರ ಬಿಡುಗಡೆಗೊಳಿಸಿದೆ.

ರಂಜಾನ್‌ ಮಾಸ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರಿಗೆ ಶುಭಕೋರಿದ ಎರಡು ದಿನಗಳ ಬಳಿಕ ಈ ಬೆಳವಣಿಗೆ ನಡೆದಿದೆ.

‘ನಾಳೆ ಆರಂಭಗೊಳ್ಳುತ್ತಿರುವ ರಂಜಾನ್ ಮಾಸದ ಹಿನ್ನೆಲೆಯಲ್ಲಿ ಸದ್ಭಾವನಾ ದ್ಯೋತಕವಾಗಿ ಮಲಿರ್ ಜೈಲಿನಲ್ಲಿರುವ ಮೀನುಗಾರರನ್ನು ಬಿಡುಗಡೆಗೊಳಿಸುವಂತೆ ಇಸ್ಲಾಮಾಬಾದ್‌ನಿಂದ ಆದೇಶಗಳು ಬಂದಿವೆ’ ಎಂದು ಜೈಲಿನ ಉಪ ಅಧೀಕ್ಷಕ ಮುಹಮ್ಮದ್ ಹುಸೇನ್‌ ಸೆಹ್ತೊ ಅವರು ತಿಳಿಸಿದ್ದಾರೆ.

113 ಭಾರತೀಯ ಮೀನುಗಾರರು ಕಾರಾಕೊರಮ್ ಎಕ್ಸ್‌ಪ್ರೆಸ್‌ ಮೂಲಕ ಲಾಹೋರ್‌ಗೆ ಪ್ರಯಾಣಿಸಲಿದ್ದು, ಅಲ್ಲಿಂದ ನಾಳೆ ವಾಘಾ ಗಡಿಯಲ್ಲಿ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಗೊಳ್ಳಲಿದ್ದಾರೆ. ಕಳೆದ ಫೆಬ್ರುವರಿಯಲ್ಲಿ 172 ಭಾರತೀಯ ಮೀನುಗಾರರು ಮಲಿರ್ ಜೈಲಿನಿಂದ ಬಿಡುಗಡೆಯಾಗಿದ್ದರು.

Write A Comment