ರಾಷ್ಟ್ರೀಯ

ಸಚಿವೆ ಸ್ಮೃತಿ ಇರಾನಿ ವಿದ್ಯಾರ್ಹತೆ ಪರಿಶೀಲನೆಯಾಗಲಿ; ಮೋದಿ ಕಿರಿಯ ಸಹೋದರ ಪ್ರಹ್ಲಾದ್ ಮೋದಿ ಒತ್ತಾಯ

Pinterest LinkedIn Tumblr

PTI9_1_2014_000173B

ಘಾಜಿಯಾಬಾದ್, ಜೂ.18: ದೆಹಲಿ ಕಾನೂನು ಸಚಿವ ಜಿತೇಂದರ್‌ಸಿಂಗ್ ತೋಮರ್ ಪ್ರಕರಣದಂತೆಯೇ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರ ವಿದ್ಯಾರ್ಹತೆ, ಪದವಿಗಳ ಬಗ್ಗೆ ಪರಿಶೀಲನೆ ನಡೆಯಬೇಕು ಎಂದು ಪ್ರಧಾನಿ ನರೇಂದ್ರಮೋದಿ ಅವರ ಕಿರಿಯ ಸಹೋದರ ಪ್ರಹ್ಲಾದ್ ಮೋದಿ ಒತ್ತಾಯಿಸಿದ್ದಾರೆ.

ಘಾಜಿಯಾಬಾದ್‌ನಲ್ಲಿಂದು ಸುದ್ದಿಗಾರರ ಜತೆ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅಖಿಲ ಭಾರತ ನ್ಯಾಯಬೆಲೆ ಅಂಗಡಿಗಳ ಮಾಲೀಕರ ಒಕ್ಕೂಟದ ಉಪಾಧ್ಯಕ್ಷ ಪ್ರಹ್ಲಾದ್ ಮೋದಿ, ಕಾಂಗ್ರೆಸ್ ಮತ್ತು ಎಎಪಿ ಸ್ಮೃತಿ ಇರಾನಿಯವರ ವಿದ್ಯಾರ್ಹತೆ ಪರಿಶೀಲನೆಗೆ ಬೇಡಿಕೆ ಇಟ್ಟಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಳ್ಳಬೇಕು ಎಂದರು.

ಎಎಪಿ ಶಾಸಕ ಮತ್ತು ಮಾಜಿ ಕಾನೂನು ಸಚಿವ ಜಿತೇಂದ್ರಸಿಂಗ್ ತೋಮರ್ ವಿಷಯದಲ್ಲಿ ತನಿಖೆ ನಡೆಯುತ್ತಿದೆ. ಹಾಗಾಗಿ ಇರಾನಿ ಬಗ್ಗೆಯೂ ತನಿಖೆ ನಡೆಸುವುದು ಸೂಕ್ತ ಎಂದರು. ಲಲಿತ್ ಮೋದಿ ಗೇಟ್ ಪ್ರಕರಣದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಹ್ಲಾದ್ ಮೋದಿ, ಅದು ಕೇವಲ ಮಾನವೀಯತೆಯ ನೆಲೆಗಟ್ಟಿನಲ್ಲಿ ಮಾಡಲಾಗಿರುವ ಸಹಾಯವಾಗಿದ್ದು, ಇದನ್ನು ಇಷ್ಟು ದೊಡ್ಡದು ಮಾಡುವ ಅಗತ್ಯವಿಲ್ಲ ಎಂದರು.

Write A Comment