ರಾಷ್ಟ್ರೀಯ

ಎರಡು ಪ್ರತ್ಯೇಕ ಕಾರ್ಯಾಚರಣೆ : 7 ಮಂದಿ ಕೆಂಪು ಉಗ್ರರ ಸೆರೆ

Pinterest LinkedIn Tumblr

7-arresteddd

ಜಮಾಯಿ/ಇಂಫಾಲ, ಜೂ.17-ಬಿಹಾರ ಮತ್ತು ಮಣಿಪುರ ಪೊಲೀಸರು ಇಂದು ಮುಂಜಾನೆ ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಏಳು ಮಂದಿ ಕೆಂಪು ಉಗ್ರರನ್ನು ಬಂಧಿಸಿದ್ದಾರೆ. ಬಿಹಾರದ ಜಮಾಯಿ ಪ್ರದೇಶದಲ್ಲಿ ಬೆಳಗ್ಗೆ ಪೊಲೀಸರು ದಾಳಿ ನಡೆಸಿ ಭರತ್‌ರಾವತ್, ದೇವ ನಾರಾಯಣ ಯಾದವ್,

ಗೋಪಾಲ್ ರಾವತ್ ಮತ್ತು ರವೀಂದ್ರ ರಾವತ್ ಎಂಬುವವರನ್ನು ಬಂಧಿಸಿದ್ದಾರೆ. ನಕ್ಸಲ್ ಚಟುವಟಿಕೆಗೆ ಸಂಬಂಧಿಸಿದ ಕರಪತ್ರ, ನಿಯತ ಕಾಲಿಕೆಗಳ ಮತ್ತಿತರೆ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಂಪಾಲಾ ವರದಿ:  ಇನ್ನು ಮಣಿಪುರದ ಸೇನಾಪತಿ ಜಿಲ್ಲೆಯಲ್ಲಿ ಮೂವರು ಕುಕಿ ನ್ಯಾಷನಲ್ ಫ್ರಂಟ್‌ಗೆ ಸೇರಿದ ನಕ್ಸಲರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಉಗ್ರರನ್ನು ಲಂಬೋಮಾಂಗ್ ಕಿಪ್ಲೆನ್ (25), ಜಾನ್ ಇಂಪುಯಿ (41) ಮತ್ತು ಮೈಪಕ್ಸಾನ್ (24) ಎಂದು ಗುರುತಿಸಲಾಗಿದೆ.
ಬಂಧಿತರಿಂದ ಒಂದು ಪಿಸ್ತೂಲು ಸೇರಿದಂತೆ ವಿವಿಧ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Write A Comment