ಅಂತರಾಷ್ಟ್ರೀಯ

ವಿಶ್ವದಾದ್ಯಂತ 168 ದಶಲಕ್ಷ ಬಾಲ ಕಾರ್ಮಿಕರು

Pinterest LinkedIn Tumblr

chaild-labourr

ವಾಷಿಂಗ್ಟನ್, ಜೂ.17- ಬಾಲ ಕಾರ್ಮಿಕ ಪದ್ಧತಿ ಹಾಗೂ ಜೀತ ಪದ್ಧತಿಗಳ ಮೂಲೋಚ್ಚಾಟನೆಗೆ ಸಿದ್ಧರಾಗುವಂತೆ ವಿಶ್ವದ ರಾಷ್ಟ್ರಗಳು ಹಾಗೂ ರಾಷ್ಟ್ರ ನಾಯಕರಿಗೆ ನೋಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಸ್ ಸತ್ಯಾರ್ಥಿ ಇಂದು ಕರೆ ನೀಡಿದ್ದಾರೆ. 21ನೆ ಶತಮಾನದಲ್ಲೂ ಈ ಬಾಲಕಾರ್ಮಿಕ ವ್ಯವಸ್ಥೆ ಹಾಗೂ ಜೀತ ಪದ್ಧತಿಗಳು ಅಸ್ತಿತ್ವದಲ್ಲಿವೆ

ಎಂದರೆ ನಿಜಕ್ಕೂ ಇದೊಂದು ನಾಚಿಕೆಗೇಡಿನ ಸಂಗತಿ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ವಿಶ್ವಾದ್ಯಂತ ಇಂದಿಗೂ ಅವ್ಯಾಹತವಾಗಿ ನಡೆಯುತ್ತಿರುವ ಬಾಲ ಕಾರ್ಮಿಕ ಪದ್ಧತಿ, ಜೀತ ಪದ್ಧತಿ, ಬಡವರು, ಕಾರ್ಮಿಕರ ಮೇಲಿನ ದೌರ್ಜನ್ಯಗಳು, ಮಹಿಳೆಯರ ಮೇಲಿನ ದೌರ್ಜನ್ಯಗಳು, ಮಹಿಳೆಯರು-ಮಕ್ಕಳ ಮಾನವ ಕಳ್ಳ ಸಾಗಣೆ, ಅನಕ್ಷರತೆ ಮುಂತಾದವುಗಳನ್ನು ಬೇರು ಸಹಿತ ಕಿತ್ತೆಸೆದು ವಿಶ್ವವನ್ನು ಇವೆಲ್ಲ ಪಿಡುಗುಗಳಿಂದ ಮುಕ್ತಗೊಳಿಸಬೇಕಾಗಿದೆ. ಇದಕ್ಕೆ ವಿಶ್ವಾದ್ಯಂತ ನಾಯಕರು ಬದ್ಧತೆ ಪ್ರದರ್ಶಿಸಬೇಕಾಗಿದೆ ಎಂದು ಸತ್ಯಾರ್ಥಿ ಅಮೆರಿಕದ ಮಾಜಿ ಅದ್ಯಕ್ಷ, ಪ್ರಜಾತಂತ್ರದ ಜನಕ ಅಬ್ರಹಾನ್ ಲಿಂಕನ್ ಸ್ಮಾರಕ ಕಾರ್ಯಕ್ರಮದಲ್ಲಿ ಭವೋದ್ವಿಗ್ನತೆಯ ಕರೆ ಕೊಟ್ಟರು.

ಜಾಗತಿಕವಾಗಿ 168 ದಶಲಕ್ಷಕ್ಕಿಂತಲೂ ಹೆಚ್ಚು ಸಂಖ್ಯೆಯ ಬಾಲ ಕಾರ್ಮಿಕರಿದ್ದಾರೆ. ಅವರೆಲ್ಲರನ್ನೂ ಮುಕ್ತಗೊಳಿಸಲು ನಾನು ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ. ಈ ಸಮಸ್ಯೆ ಒಂದು ದೇಶದ್ದಲ್ಲ. ಇಡೀ ವಿಶ್ವವನ್ನು ಕಾಡುತ್ತಿರುವ ಸಮಸ್ಯೆ. ಹಾಗಾಗಿ ಇಡೀ ಅಂತಾರಾಷ್ಟ್ರೀಯ ಸಮುದಾಯ ಇಂದು ಈ ಅನಿಷ್ಟ ವ್ಯವಸ್ಥೆ ತೊಡೆದುಹಾಕಲು ಟೊಂಕಕಟ್ಟಿ ನಿಲ್ಲಬೇಕಾಗಿದೆ. ಪ್ರತಿಯೊಬ್ಬರೂ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಶಪಥ ಮಾಡಬೇಕಾಗಿದೆ ಎಂದಿದ್ದಾರೆ. ಯಾವುದೇ ದೇಶದ ಅಭಿವೃದ್ಧಿ ಆರಂಭವಾಗುವುದು ಮಕ್ಕಳಿಂದಲೇ. ಇದನ್ನು ವಿಶ್ವಸಂಸ್ಥೆಯು ಸಾಮಾನ್ಯ ಸಭೆಯಲ್ಲಿ ತನ್ನ ಕಾರ್ಯಕ್ರಮದ ಪಟ್ಟಿಗೆ ಸೇರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ವಿಶ್ವದ ಅನೇಕ ಮಕ್ಕಳ ಹಕ್ಕುಗಳ ರಕ್ಷಣೆಯ ಸಂಸ್ಥೆಗಳು ಭಾಗವಹಿಸಿದ್ದವು.

Write A Comment